ಮೈಸೂರು[ಜೂ. 05]  ಸಿದ್ದರಾಮಯ್ಯ ನನ್ನ ಟಾರ್ಗೆಟ್ ಅಲ್ಲ. ನಾನು ಸಿದ್ದರಾಮಯ್ಯರ ಟಾರ್ಗೆಟ್ ಅಲ್ಲ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರೆ  ನಾಯಕರು. ಕಳೆದ ಬಾರಿ ರಾಜ್ಯದಲ್ಲಿ 5 ವರ್ಷಗಳ ಕಾಲ ಉತ್ತಮವಾದ ಆಡಳಿತ ನೀಡಿದ್ದಾರೆ. ರಾಷ್ಟ್ರದ ನಾಯಕರು ಹಾಗೂ ಜನತೆ ಸಿದ್ದರಾಮಯ್ಯರನ್ನ ಒಪ್ಪಿಕೊಂಡಿದ್ದಾರೆ ಎಂದು  ಸಚಿವ ಜಿಟಿ ದೇವೇಗೌಡ ಹಾಡಿ ಹೊಗಳಿದ್ದಾರೆ.

‘ಅಪ್ಪ-ಮಕ್ಕಳ ಜತೆ ಏಗೋಕಾಗ್ದೆ ವಿಶ್ವನಾಥ್ ರಾಜೀನಾಮೆ ಕೊಟ್ರು’

ನಿನ್ನೆ ಜೆಡಿಎಸ್ ಸಭೆ ನಡೆದಿದೆ. ಸಭೆಯಲ್ಲಿ ಎಲ್ಲಾ ನಾಯಕರು ಚರ್ಚೆ ಮಾಡಿದ್ದೇವೆ. ಮುಂದೆಯೂ ಎಚ್. ವಿಶ್ವನಾಥ್ ಅವರೆ ಜೆಡಿಎಸ್ ರಾಜ್ಯಾಧ್ಯಕ್ಷ ಆಗ್ತಾರೆ. ನಾಳೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನ ವಿಶ್ವನಾಥ್ ಭೇಟಿ ಮಾಡಲಿದ್ದಾರೆ. ಈಗಾಗಲೇ ವಿಶ್ವನಾಥ್ ಅವ್ರು ಕೂಡ ರಾಷ್ಟ್ರೀಯ ಅಧ್ಯಕ್ಷರ ಮಾತಿಗೆ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಹಾಗಾಗಿ ವಿಶ್ವನಾಥ್ ಅವರೇ ಮುಂದೆಯೂ ಅಧ್ಯಕ್ಷರಾಗಿ ಇರಲಿದ್ದಾರೆ ಎಂದರು.

ಜೆಡಿಎಸ್ ನಲ್ಲಿ ನನ್ನ ಮಾತಿಗೆ ಬೆಲೆ ದೊರೆಯುತ್ತಿಲ್ಲ. ದೋಸ್ತಿ ಸರಕಾರದ ಸಮನ್ವಯ ಸಮಿತಿ ಕನಿಷ್ಠ ಕಾರ್ಯಕ್ರಮ ನಿಗದಿ ಮಾಡಲು ವಿಳಪವಾಗಿದೆ ಎಂದು ಆರೋಪಿಸಿದ್ದ ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಚ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ್ದರು.