- ಜಿಟಿಜಿಗೆ ಉನ್ನತ ಶಿಕ್ಷಣ ಬದಲು ಸಹಕಾರ
- ಪುಟ್ಟರಾಜುಗೆ ಮಂಡ್ಯ ಜಿಲ್ಲಾ ಉಸ್ತುವಾರಿ
ಬೆಂಗಳೂರು[ಜೂ.11]: ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು ಜೆಡಿಎಸ್'ನಲ್ಲಿ ಅತೃಪ್ತಿಗೊಂಡಿರುವ ಸಚಿವರ ಖಾತೆಯನ್ನು ಬದಲಾಯಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಉನ್ನತ ಶಿಕ್ಷಣ ಖಾತೆಗೆ ಜಿ.ಟಿ.ದೇವೇಗೌಡ ಹಾಗೂ ಸಣ್ಣ ನೀರಾವರಿಗಾಗಿ ಸಿ.ಎಸ್. ಪುಟ್ಟರಾಜು ಬೇಸರ ವ್ಯಕ್ತಪಡಿಸಿ ರಾಜೀನಾಮೆಗೆ ಮುಂದಾಗಿದ್ದರು. ಕಳೆದ 2 ದಿನಗಳಲ್ಲಿ ಇಬ್ಬರೊಂದಿಗೆ ಮಾತುಕತೆ ನಡೆಸಿರುವ ಸಿಎಂ ಖಾತೆ ಬದಲಾವಣೆಗೆ ಸಮ್ಮತಿಸಿದ್ದಾರೆ.
ಜಿ.ಟಿ.ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ಬದಲು ಸಹಕಾರ ಖಾತೆ, ಪುಟ್ಟರಾಜು ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ನೀಡಲು ಒಪ್ಪಿಗೆ ಸೂಚಿಸಿರುವುದಾಗಿ ಸುವರ್ಣ ನ್ಯೂಸ್'ಗೆ ಉನ್ನತ ಮೂಲಗಳು ತಿಳಿಸಿವೆ.
8ನೇ ತರಗತಿ ಓದಿರುವ ನನಗೆ ಉನ್ನತಶಿಕ್ಷಣ ಏಕೆ ನೀಡಿದ್ದೀರಿ. ಜನರೊಂದಿಗೆ ಬೆರತು ಕೆಲಸ ಮಾಡುವ ಸಚಿವಸ್ಥಾನ ನೀಡಿ ಎಂದು ಬಹಿರಂಗವಾಗಿಯೇ ಅಳಲು ತೋಡಿಕೊಂಡಿದ್ದರೆ, ಮತ್ತೊಬ್ಬ ಸಚಿವ ಪುಟ್ಟರಾಜು ಮಂಡ್ಯ ಜಿಲ್ಲಾ ಉಸ್ತುವಾರಿಗೆ ಪಟ್ಟು ಹಿಡಿದಿದ್ದರು.

Last Updated 11, Jun 2018, 11:13 AM IST