ದಲಿತನ ಭೂಮಿ ಕಬಳಿಕೆ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ವಿರುದ್ಧ ಎಫ್‌ಐಆರ್‌

Minister Giriraj Singh among 33 named in land sale Forgery case
Highlights

ಬಿಹಾರದಲ್ಲಿ ದಲಿತ ವ್ಯಕ್ತಿಯೊಬ್ಬರ ಜಮೀನನ್ನು ಅತಿಕ್ರಮಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.

ಪಾಟ್ನಾ: ಬಿಹಾರದಲ್ಲಿ ದಲಿತ ವ್ಯಕ್ತಿಯೊಬ್ಬರ ಜಮೀನನ್ನು ಅತಿಕ್ರಮಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.

ಫೆ.2ರಂದು ವಿಶೇಷ ಎಸ್‌ಸಿ/ಎಸ್‌ಟಿ ಕೋರ್ಟ್‌ ಆದೇಶದಂತೆ ಗಿರಿರಾಜ್‌ ಸಿಂಗ್‌ ಮತ್ತು 32 ಇತರ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಅಸೋಪುರ್‌ ಗ್ರಾಮದ ನಿವಾಸಿ ದೂರುದಾರ ರಾಮ್‌ ನಾರಾಯಣ್‌ ಪ್ರಸಾದ್‌ ಎನ್ನುವವರು ಸಚಿವ ಗಿರಿರಾಜ್‌ ಸಿಂಗ್‌ ತಮಗೆ ಸೇರಿದ ಎರಡು ಎಕರೆ 6 ಗುಂಟೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ.

ಇದನ್ನು ಪ್ರತಿಭಟಿಸಿದ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಕೋರ್ಟ್‌ಗೆ ಅರ್ಜಿಸಲ್ಲಿಸಿದ್ದರು. ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ ಅಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

loader