ಮೈಸೂರು(ನ.12): ರಾಜಕಾರಣಿಗಳ ಬ್ಲಾಕ್​ ಮನಿ ರಕ್ಷಣೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ ಎಂಬ ಅನುಮಾನ ಕಂಡುಬಂದಿದೆ. ಮೈಸೂರಿನಲ್ಲಿ ಇದಕ್ಕಾಗಿ ಟೊಂಕಕಟ್ಟಿ ನಿಂತಿದೆ ಚೆಸ್ಕಾಂ ಸಂಸ್ಥೆ. ಚೆಸ್ಕಾಂ ಎಂಡಿ ಕಿರಣ್,​ ಸಚಿವ ಮಹದೇವಪ್ಪ ಹಾಗೂ ಪುತ್ರ ಸುನಿಲ್ ಬೋಸ್​ಗೆ ಪರಮಾಪ್ತ ಆಗಿದ್ದು, ಚೆಸ್ಕಾಂನ ವ್ಯಾಪ್ತಿಯ ಎಲ್ಲಾ ಬಿಲ್​ ಕೌಂಟರ್​ಗಳಿಗೆ ಕಟ್ಟಾಜ್ಞೆ ಹೊರಡಿಸಿರುವ ಮೂಲಕ ಅಲ್ಲಿಗೆ ಬರುವ ಎಲ್ಲಾ ಚಿಲ್ಲರೆ ಮೊತ್ತದ ಹಣವನ್ನು ಸಂಗ್ರಹ ಮಾಡಿ, ಯಾರಿಗೂ ಚಿಲ್ಲರೆ ವಾಪಸ್ ಕೊಡಬೇಡಿ ಎಂದು ಹೇಳಿದ್ದಾರೆ. ಸಂಗ್ರಹವಾಗುವ 100, 50 ರೂಪಾಯಿ ನೋಟುಗಳನ್ನು ಉಳಿಸಿ ಅದೇ ಮೊತ್ತಕ್ಕೆ ಹೊಸ 500, 2000 ಸಾವಿರ ನೋಟುಗಳನ್ನು ಪಡೆಯುವ ಹುನ್ನಾರ ನಡೆದಿದೆ ಎಂದು ಆರೋಪಿಸಲಾಗಿದೆ.  ಬಿಲ್​ ಕೌಂಟರ್​ಗಳಲ್ಲಿ ಖುದ್ದು ಎಇ, ಎಇಇಗಳೇ ನಿಂತು ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ನಯಾ ಪೈಸೆ ಚಿಲ್ಲರೆ ವಾಪಸ್​ ಕೊಡದಂತೆ ತಾಕೀತು ಮಾಡಲಾಗಿದೆ ಎನ್ನಲಾಗ್ತಿದೆ.