ಸಚಿವ ಡಿ.ಕೆ ಶಿವಕುಮಾರ್ ಯೂ ಟರ್ನ್ ..?

Minister DK Shivakumar U Turn
Highlights

  ನನ್ನ ಬಳಿ ಬಿಜೆಪಿ ನಾಯಕರ ಡೈರಿ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿಯ ಪ್ರತಿ ಸವಾಲಿಗೆ ಹಾರಿಕೆಯ ಉತ್ತರ ನೀಡಿದ್ದಾರೆ. 

ಬೆಂಗಳೂರು :  ನನ್ನ ಬಳಿ ಬಿಜೆಪಿ ನಾಯಕರ ಡೈರಿ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿಯ ಪ್ರತಿ ಸವಾಲಿಗೆ ಹಾರಿಕೆಯ ಉತ್ತರ ನೀಡಿದ್ದಾರೆ. ನನ್ನ ಬಳಿ ಬಿಜೆಪಿ ಡೈರಿ ಇದೆ, ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಈ ಹಿಂದೆ ಡಿಕೆಶಿ ಹೇಳಿದ್ದರು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಕೂಡಲೇ ಬಹಿರಂಗಪಡಿಸಲಿ ಎಂದು ಸವಾಲು ಹಾಕಿತ್ತು. ಬಿಜೆಪಿ ಆಗ್ರಹದ ಬಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಮಾತನಾಡಿದ ಅವರು, ನನ್ನ ಬಳಿ ಡೈರಿ ಇದೆಯೋ ಇಲ್ಲವೋ ನನಗೆ ಗೊತ್ತಿದೆ. ಇದೆ ಅಥವಾ ಇಲ್ಲ ಎನ್ನುವ ವಿಚಾರ ಈಗ ಬೇಡ. 

ಎಲ್ಲದಕ್ಕೂ ಸಮಯ ಬರುತ್ತದೆ, ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಿದರು.ಅಲ್ಲದೆ, ತಮ್ಮ ಬಳಿ ಇದೆ ಎಂದಿದ್ದ ಡೈರಿ ವಿಚಾರದ ಬದಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಚುನಾವಣೆ ವೇಳೆ ಬಿಡುಗಡೆ ಮಾಡಿದ್ದ ಡೈರಿಯ ಬಗ್ಗೆ ತನಿಖೆ ನಡೆಸಲಿ ಎಂದು ಮತ್ತೊಂದು ಸವಾಲು ಹಾಕಿದರು. ದಿನೇಶ್ ಗುಂಡೂರಾವ್ ಡೈರಿ ಬಹಿರಂಗಗೊಳಿಸಿದ್ದರು. ಅದರಲ್ಲಿ ಲೆಹರ್ ಸಿಂಗ್ ಸೇರಿದಂತೆ ಹಲವರ ಮಾಹಿತಿ ಇತ್ತು. ಬಿಜೆಪಿಯವರು ಆ ಡೈರಿ ವಿಚಾರವೇಕೆ ಪ್ರಸ್ತಾಪ ಮಾಡು ತ್ತಿಲ್ಲ? ಆ ಡೈರಿ ಬಗ್ಗೆ ಏಕೆ ತನಿಖೆ ನಡೆಯುತ್ತಿಲ್ಲ? ಬಿಜೆಪಿ ಮುಖಂಡರಿಗೆ ಅದರಲ್ಲಿ ಯಾರ ಹೆಸರು ಪ್ರಸ್ತಾಪವಾಗಿತ್ತು ಎಂಬುದು ಗೊತ್ತಿಲ್ಲವೇ ಎಂದರು.

ಡೈರಿ ಇದ್ದರೆ ತನಿಖೆಗೆ ನೀಡಲಿ: ಶೋಭಾ ಸಚಿವ ಡಿ.ಕೆ.ಶಿವಕುಮಾರ್ ಬಳಿ ನಮ್ಮ ಪಕ್ಷದ ಮುಖಂಡರಿಗೆ ಸಂಬಂಧಿಸಿದ ಡೈರಿ ಇದ್ದರೆ ಸಂಬಂಧಪಟ್ಟ ಇಲಾಖೆಗೆ ನೀಡಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸವಾಲು ಎಸೆದಿದ್ದಾರೆ. ಡೈರಿಯನ್ನು ಯಾರು ಬೇಕಾದರೂ ಸೃಷ್ಟಿ ಮಾಡ ಬಹುದು. ಆದರೆ, ಅದರ ಬಗ್ಗೆ ತನಿಖೆ ಎದುರಿ ಸಬೇಕು. ಅದಕ್ಕೆ ನಾವು ಸಿದ್ಧ. ಸಚಿವ ಶಿವಕುಮಾರ್ ಹೇಳಿದ ರೀತಿ ಅವರ ಬಳಿ ಡೈರಿ ಇದ್ದರೆ ಸಂಬಂಧ ಪಟ್ಟ ಇಲಾಖೆಗಳಿಗೆ ನೀಡಲಿ ಎಂದರು.

loader