ಬೆಂಗಳೂರು[ಜ.13]  ಯಾರೋ 3 ಜನ ಎಂಎಲ್ಎಗಳು ಮುಂಬೈಗೆ ಹೋಗಿದ್ದಾರೆ. ಆದರೆ ಅವರು ಯಾರು ಗೊತ್ತಿಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಯಾವ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ಅವರ ಹೆಸರನ್ನು ಈ ಸಂದರ್ಭದಲ್ಲಿ ಬಹಿರಂಗ ಮಾಡುವುದಿಲ್ಲ ಎಂದು ಡಿಕೆಶಿ ಹೇಳಿದರು.

"

ಆಪರೇಷನ್ ಕಮಲ ಎನ್ನುತ್ತಾ  ಬಿಜೆಪಿಯವರು ಗೊಂದಲ, ಅಸ್ಥಿರತೆ ಎಲ್ಲಾ ಮೂಡಿಸುತ್ತಿದ್ದಾರೆ..ಮೂಹರ್ತ ಫಿಕ್ಸ್ ಮಾಡಿದ್ದಾರೆ‌. ಜೈಲಿಗೆ ಕಳಿಸಿಕೊಡ್ತೀನಿ ಅಂತ ಹೇಳಿ ಡೇಟ್ ಕೂಡ ಫಿಕ್ಸ್ ಮಾಡಿದ್ದರು. ಬಹಳ ಸಂತೋಷ ಎಂದು ವ್ಯಂಗ್ಯವಾಡಿದರು.

ಬೆಳೆ ಪರಿಹಾರಕ್ಕಾಗಿ ಡಿಕೆಶಿ ಕಾಲಿಗೆ ಬಿದ್ದ ರೈತ!

ದಿನೇಶ್ ಗುಂಡೂರಾವ್ ಈಗಾಗಲೇ ಎಸಿಬಿ, ಇನ್ ಕಮ್ ಟ್ಯಾಕ್ಸ್ ಗೆ ದೂರು ಕೊಟ್ಟಿದ್ದಾರೆ. ಯಾವ ರೀತಿಯ ಆಮಿಷಗಳನ್ನು ಒಡ್ಡಿದ್ದರು ಎಂಬ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ.  ಗಣೇಶ್ ಹುಕ್ಕೇರಿ ತಂದೆ ಸಂಸದರು, ಪಕ್ಷಕ್ಕೆ ನಿಷ್ಠೆ ಉಳ್ಳವರು. ಬಿಜೆಪಿಯವರ ಆಮಿಷಗಳ ಎಲ್ಲ ದಾಖಲೆ ನಮ್ಮ ಬಳಿ ಇದೆ. ಸಿಎಂ ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತು. ಆದರೆ ಹೊರಗೆ ಹಾಕಿಲ್ಲ ಎಂದು ಹೇಳಿದರು. ನಾನೇ ಆಗಿದ್ದರೆ ಬಿಜೆಪಿಯವರ ಎಲ್ಲ ವಿಚಾರಗಳನ್ನು 24 ಗಂಟೆಯಲ್ಲಿ ಬಿಚ್ಚಿಡುತ್ತಿದ್ದೆ ಎಂದರು.