ಸಚಿವ ಡಿ.ಕೆ ಶಿವಕುಮಾರ್‌ಗೆ ಒಲಿಯಲಿದೆ ಉನ್ನತ ಸ್ಥಾನ

First Published 15, Jun 2018, 12:47 PM IST
Minister DK Shivakumar Blessed By Kadu siddeshwara Shivayogi Swamiji
Highlights

ಸಚಿವ ಡಿಕೆ ಶಿವಕುಮಾರ್  ಅವರ ಆರಾಧ್ಯ ದೈವವಾದ ಕಾಡು ಸಿದ್ದೇಶ್ವರ ಮಠದ  ಶಿವಯೋಗಿ ಶ್ರೀಗಳು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.  

ತುಮಕೂರು :  ಸಚಿವ ಡಿಕೆ ಶಿವಕುಮಾರ್  ಅವರ ಆರಾಧ್ಯ ದೈವವಾದ ಕಾಡು ಸಿದ್ದೇಶ್ವರ ಮಠದ  ಶಿವಯೋಗಿ ಶ್ರೀಗಳು ಅವರಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.  

ಡಿ.ಕೆ.ಶಿವಕುಮಾರ್ ಅವರು ಮಠದ ಮಗನಾಗಿ ಬೆಳೆದಿದ್ದಾರೆ. ಅವರು ಇಂತಹದ್ದೇ ಖಾತೆ ಬೇಕು ಎಂದು ಅಪೇಕ್ಷೆ ಪಡುವುದಿಲ್ಲ.  ಇನ್ನು ಅವರು ಆ ರೀತಿಯಾಗಿ ಅಪೇಕ್ಷೆ ಪಡುವುದೂ ಕೂಡ ಬೇಡ.  ಯಾವುದೇ ಖಾತೆ ಬಂದರೂ ಕೂಡ ಕಾಯಕವೇ ಕೈಲಾಸ ಎಂದು ನಿರ್ವಹಿಸಿಕೊಂಡು ಹೋಗಲಿ. ಇರುವ ಸ್ಥಾನದಲ್ಲೇ ಅವರು ಸಾಧನೆ ಮಾಡಲಿ ಎಂದು ಹೇಳಿದ್ದಾರೆ. 

ಮುಂದೊಂದು ದಿನ ಅವರು ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಎಂದು ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿ ‌ಸಲಹೆ ನೀಡಿದ್ದಾರೆ.  ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಇರುವ ಕಾಡು ಸಿದ್ದೇಶ್ವರ ಮಠದ ಶಿವಯೋಗಿ ಶ್ರೀಗಳು ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಈ ರೀತಿಯ ಸಲಹೆ ನೀಡಿದ್ದಾರೆ. 

ಕಾಡು ಸಿದ್ದೇಶ್ವರ  ಡಿ.ಕೆ ಶಿವಕುಮಾರ್ ಅವರ ಆರಾಧ್ಯ ದೈವವಾಗಿದ್ದು, ಯಾವುದೇ ಕೆಲಸ ಕಾರ್ಯ ಕೈಗೊಳ್ಳುವ ಮೊದಲು ಅವರು ಶ್ರೀಗಳ ಆಶೀರ್ವಾದ ಪಡೆಯುತ್ತಾರೆ.

loader