ಮೈತ್ರಿ ಸರ್ಕಾರದ ರೂವಾರಿ ಕುಮಾರಸ್ವಾಮಿ ಬಜೆಟ್ ಗೆ ಬರಲ್ವಂತೆ

First Published 28, Jun 2018, 3:44 PM IST
Minister D K Shivakumar will Absent JDS-Congress Coalition Government Budget
Highlights

ಜುಲೈ 5ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟ್ ಗೆ ಮೈತ್ರಿ ಸರ್ಕಾರದ ರೂವಾರಿ ಎಂದೇ ಹೆಸರು ಪಡೆದ ಡಿ.ಕೆ ಶಿವಕುಮಾರ್ ಅವರು ಗೈರಾಗಲಿದ್ದಾರೆ. 

ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸುವ ದಿನ ತಾವು ಸದನದಲ್ಲಿ ಭಾಗವಹಿಸುತ್ತಿಲ್ಲ ಎಂದಿದ್ದೀರಲ್ಲಾ ಎಂಬ  ಪ್ರಶ್ನೆಗೆ, ಪ್ರಮುಖ ಕಾರ್ಯಕ್ರಮ ನಿಮಿತ್ತ ಬಜೆಟ್ ಮಂಡನೆ ವೇಳೆ ಸದನದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವುದು ಬೇಡ. 

ಆದರೆ, ಪ್ರಯಾಣಕ್ಕೆ ವಿಮಾನ ಬಳಸಿಯಾದರೂ ಕೆಲ ಗಂಟೆಯಾದರೂ ಬಜೆಟ್ ಮಂಡನೆ ವೇಳೆ ಇರಲು ಪ್ರಯತ್ನಿಸುತ್ತೇನೆ ಎಂದು ಶಿವಕುಮಾರ್ ಅವರು ತಿಳಿಸಿದರು.

ಇನ್ನು ಇದೇ ವೇಳೆ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋ ಬಗ್ಗೆ ಪ್ರಸ್ತಾಪಿಸಿದ ಅವರು ಸರ್ಕಾರದ ಕಾಲಾವಧಿ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿರುವುದನ್ನು ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. 

ಇದು ಲೋಕಾಭಿರಾಮವಾಗಿ ಆಡಿದ ಮಾತೇ ಹೊರತು ಅಧಿಕೃತ ಮಾತಲ್ಲ. ಇಂತಹ ಹೇಳಿಕೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

loader