ರಾಜಕೀಯ ಬಚ್ಚಲುಕೋಣೆ. ರಾಜಕೀಯವನ್ನೀಗ ನಾನು ಬಚ್ಚಲು ಮನೆ ಅಂತೀನಿ. ರಾಜಕೀಯ ಕ್ಷೇತ್ರವನ್ನು ದೇವರ ಕೋಣೆ ಅಂತಾರೆ. ದೇವರಕೋಣೆ ಒಂದು ದಿನ ಶುಚಿ ಮಾಡಲಿಲ್ಲವೆಂದರೂ ನಡೆಯುತ್ತೆ.

ಬೆಂಗಳೂರು(ಡಿ.25): ನನ್ನ ಖಾತೆ ನೀರಿಲ್ಲದ ಖಾತೆ ಎಂದು ಸಚಿವ ಸ್ಥಾನ ನೀಡಿದ ನಂತರ ಗೊತ್ತಾಯಿತು' ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ಮಲ್ಲೇಶ್ವರಂದಲ್ಲಿ ಗುಡ್ ಗವರ್ನೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಟ್ಟಾಗ ಬಹಳ ಒಳ್ಳೇ ಖಾತೆ ಎಂದು ಖುಷಿಪಟ್ಟಿದ್ದೆ ಆಮೇಲೆ ವಾಸ್ತಾವಾಂಶ ಗೊತ್ತಾಯಿತು' ಎಂದು ಹೇಳಿದರು.

ರಾಜಕೀಯ ಎಂದರೆ ಬಚ್ಚಲು ಕೋಣೆ

ರಾಜಕೀಯ ಬಚ್ಚಲುಕೋಣೆ. ರಾಜಕೀಯವನ್ನೀಗ ನಾನು ಬಚ್ಚಲು ಮನೆ ಅಂತೀನಿ. ರಾಜಕೀಯ ಕ್ಷೇತ್ರವನ್ನು ದೇವರ ಕೋಣೆ ಅಂತಾರೆ. ದೇವರಕೋಣೆ ಒಂದು ದಿನ ಶುಚಿ ಮಾಡಲಿಲ್ಲವೆಂದರೂ ನಡೆಯುತ್ತೆ. ಆದರೆ ಬಚ್ಚಲು ಮನೆಯನ್ನು ದಿನ ಶುಚಿ ಮಾಡದಿದ್ದರೆ ಹೇಗಿರುತ್ತೆ? ಆದ್ದರಿಂದ ರಾಜಕೀಯವನ್ನು ಬಚ್ಚಲು ಕೋಣೆ ಎನ್ನುವುದು ಸೂಕ್ತ.ಇದನ್ನು ಯಾರು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಬಹುದು' ಎಂದು ತಿಳಿಸಿದರು.