ಚಿಕ್ಕರಾಯಪ್ಪ ಕಾವೇರಿ ನಿಗಮದ ಎಂಡಿಯಾಗಿದ್ದು, ಸಿಎಂ ಆಪ್ತರೂ ಹೌದು ಎನ್ನಲಾಗಿದೆ. ಜಯಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನ ಸಂಜಯನಗರದಲ್ಲಿರುವ ಜಯಚಂದ್ರ ನಿವಾಸದ ಮೇಲೆ ದಾಳಿ ನಡೆದಿದೆ. ಜಯಚಂದ್ರ ಪುತ್ರ ತ್ರಿಜೇಶ್​ ಹೆಸರಲ್ಲಿ ಐಷಾರಾಮಿ ಪೋರ್ಶ್​, ಲ್ಯಾಂಬರ್ಗಿನಿ ಕಾರುಗಳನ್ನೂ ಖರೀದಿಸಿರುವ ಬೆಳಕಿಗೆ ಬಮದಿದೆ.

ಬೆಂಗಳೂರು(ಡಿ.01): ನೋಟ್ ಬ್ಯಾನ್ ಬಳಿಕ ಕಾಳಧನಿಕರ ಬೇಟೆಗೆ ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಸಚಿವ ಎಚ್​.ಸಿ.ಮಹದೇವಪ್ಪ ಆಪ್ತರಾದ ಜಯಚಂದ್ರ, ಚಿಕ್ಕರಾಯಪ್ಪ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಸುಮಾರು ಯಲ್ಲಿ 4.5 ಕೋಟಿ ರೂಪಾಯಿಯಷ್ಟು ಹೊಸ 2000 ರೂ. ನೋಟುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕರಾಯಪ್ಪ ಕಾವೇರಿ ನಿಗಮದ ಎಂಡಿಯಾಗಿದ್ದು, ಸಿಎಂ ಆಪ್ತರೂ ಹೌದು ಎನ್ನಲಾಗಿದೆ. ಜಯಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನ ಸಂಜಯನಗರದಲ್ಲಿರುವ ಜಯಚಂದ್ರ ನಿವಾಸದ ಮೇಲೆ ದಾಳಿ ನಡೆದಿದೆ. ಜಯಚಂದ್ರ ಪುತ್ರ ತ್ರಿಜೇಶ್​ ಹೆಸರಲ್ಲಿ ಐಷಾರಾಮಿ ಪೋರ್ಶ್​, ಲ್ಯಾಂಬರ್ಗಿನಿ ಕಾರುಗಳನ್ನೂ ಖರೀದಿಸಿರುವ ಬೆಳಕಿಗೆ ಬಂದಿದೆ.

ವಶಪಡಿಸಿಕೊಂಡ ಸಂಪತ್ತು

- 6 ಕೋಟಿಗೂ ಹೆಚ್ಚು ನಗದು ವಶ, 7 ಕೆ.ಜಿ ಚಿನ್ನಾಭರಣ ವಶ

- 2 ಸಾವಿರ ಮುಖ ಬೆಲೆಯ 4.7 ಕೋಟಿ ರೂ. ಪತ್ತೆ

- ಸ್ಥಿರ ಮತ್ತು ಚರಾಸ್ತಿಗೆ ಸಂಬಂಧಿಸಿದ ದಾಖಲೆಗಳೂ ಪತ್ತೆ

- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಮಾಧ್ಯಮ ಪ್ರಕಟಣೆ