ಕೇಂದ್ರದ ಸಿಆರ್‌ಎಫ್ ನಿಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 108 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ,

ಹೊಳೆನರಸೀಪುರ(ನ.27): ಕೇಂದ್ರದ ಮಂತ್ರಿಗಳಲ್ಲಿ ಪ್ರಭಾವ ಬೀರಿ ಜಿಲ್ಲೆಗೆ ಬಿಡುಗಡೆಯಾದ ಅನುದಾನದಲ್ಲಿ ಅರ್ಧದಷ್ಟನ್ನು ಹೊಳೆನರಸೀಪುರ ತಾಲೂಕು ಒಂದಕ್ಕೇ ಬಿಡುಗಡೆ ಮಾಡಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಜಿಲ್ಲೆಯ ಸಂಸದರೋ ಇಲ್ಲ, ಹೊಳೆನರಸೀಪುರ ತಾಲೂಕಿಗಷ್ಟೆ ಸಂಸದರೋ ಎಂಬ ಅನುಮಾನ ಮೂಡಿದೆ ಎಂದು ಸಚಿವ ಎ.ಮಂಜು ಕಿಡಿಕಾರಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಸಿಆರ್‌ಎಫ್ ನಿಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 108 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಅದರಲ್ಲಿ ಹೊಳೆನರಸೀಪುರ ತಾಲೂಕಿಗಷ್ಟೇ 60-70 ಕೋಟಿ ರೂ. ಬಿಡುಗಡೆಗೊಳಿಸಲು ದೇವೇಗೌಡರು ಕೇಂದ್ರದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ದೂರಿದರು.