ಅವರೊಂದಿಗೆ ಅವರ ಮಕ್ಕಳಾದ ಐಶ್ವರ್ಯ, ಆಭರಣ ಹಾಗೂ ಆಕಾಶ್ ಕೂಡಾ ತುಲಾಭಾರ ಸೇವೆ ನೆರವೇರಿಸಿದರು.

ಸುಬ್ರಹ್ಮಣ್ಯ(ಸೆ.25): ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ಶ್ರೀ ಕ್ಷೇತ್ರಕ್ಕೆ ಬೆಳಗ್ಗೆ ಕುಟುಂಬ ಸಮೇತರಾಗಿ ಆಗಮಿಸಿದ ಅವರು ಶ್ರೀ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಅವರ ಮಕ್ಕಳಾದ ಐಶ್ವರ್ಯ, ಆಭರಣ ಹಾಗೂ ಆಕಾಶ್ ಕೂಡಾ ತುಲಾಭಾರ ಸೇವೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಉಪಸ್ಥಿತರಿದ್ದರು.