ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸ್ಲಮ್ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟರೂ ನೋಂದಣಿ ಮಾಡಿಸಿಲ್ಲವೆಂದು ಕಾರ್ಯಕ್ರಮದಲ್ಲಿ ನೋಂದ ನಾಗರಿಕರೊಬ್ಬರು ಕರೆ ಮಾಡಿ ಸಚಿವರಿಗೆ ಸಮಸ್ಯ ಹೇಳಿಕೊಂಡರು. ಕರೆ ಮಾಡಿದ 2 ಗಂಟೆಯಲ್ಲೇ ಸಚಿವರು ಮಂಡ್ಯದ ಹಾಲಹಳ್ಳಿ ಸ್ಲಂಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಕೂಡಲೇ  ಕ್ರಯ ಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.   

ಬೆಂಗಳೂರು(ಜು.09): ಹತ್ತು ಹಲವು ಸಮಸ್ಯೆಗಳು, ಕುಂತಲ್ಲೇ ಪರಿಹಾರ. ಇದು ಸುವರ್ಣ ನ್ಯೂಸ್ ಕಳೆದ ಹಲವು ತಿಂಗಳಿಂದ ನಡೆಸುತ್ತಿರೋವ ವಿಶೇಷ ಕಾರ್ಯಕ್ರಮ ಹಲೋ ಮಿನಿಸ್ಟರ್ .

ಈ ಬಾರಿ ವಸತಿ ಸಚಿವ ಎಂ.ಕೃಷ್ಣಪ್ಪ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರಲ್ಲದೆ ಖುದ್ದು ತಾವೇ ಪರಿಹರಿಸುವುದಾಗಿ ಭರವಸೆ ನೀಡಿದರು.

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸ್ಲಮ್ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟರೂ ನೋಂದಣಿ ಮಾಡಿಸಿಲ್ಲವೆಂದು ಕಾರ್ಯಕ್ರಮದಲ್ಲಿ ನೋಂದ ನಾಗರಿಕರೊಬ್ಬರು ಕರೆ ಮಾಡಿ ಸಚಿವರಿಗೆ ಸಮಸ್ಯ ಹೇಳಿಕೊಂಡರು. ಕರೆ ಮಾಡಿದ 2 ಗಂಟೆಯಲ್ಲೇ ಸಚಿವರು ಮಂಡ್ಯದ ಹಾಲಹಳ್ಳಿ ಸ್ಲಂಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಕೂಡಲೇ ಕ್ರಯ ಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಕಲಬುರಗಿಯಲ್ಲಿ ಕೇವಲ ಪಕ್ಷದ ಕಾರ್ಯಕರ್ತರಿಗೆ, ಲಂಚ ಕೋರರಿಗೆ ಮಾತ್ರ ಮನೆ ಮಂಜೂರು ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಸಚಿವರು, ಯಾರಾದರು ಲಂಚ ಕೇಳಿದರೆ ಅವರ ಬಗ್ಗೆ ನೇರವಾಗಿ ತಮಗೆ ಮಾಹಿತಿ ಕೊಡುವಂತೆ ತಿಳಿಸಿದರು.

ಇನ್ನು ಹುಬ್ಬಳಿಯಿಂದ ಕರೆಮಾಡಿದ್ದ ವೈಶಾಲಿ ಎಂಬುವರು, ಮನೆಗಾಗಿ ತಾನು ಹಲವು ಬಾರಿ ಅರ್ಜಿ ಸಲ್ಲಿಸಿದರೂ ಮನೆ ಕೊಟ್ಟಿಲ್ಲ ಅಂತಾ ದುಃಖ ತೋರ್ಪಡಿಸಿಕೊಂಡರು. ಇವರ ನೋವನ್ನು ಆಲಿಸಿದ ಸಚಿವರು ಶೀಘ್ರದಲ್ಲಿಯೇ ಈ ಬಗ್ಗೆ ಮಾಹಿತಿ ಪಡೆದುಕೊಂಡು ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು.

ಪರಿಹಾರ ಪತ್ರಿಕೋದ್ಯಮದ ಪ್ರತೀಕವಾಗಿ ಪ್ರತಿ ವಾರ ಹಮ್ಮಿಕೊಳ್ಳುತ್ತಿರುವ ಸುವರ್ಣ ನ್ಯೂಸ್'ನ ಹಲೋ ಮಿನಿಸ್ಟರ್​ ಕಾರ್ಯಕ್ರಮಕ್ಕೆ ವಸತಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.