ಕಳ್ಳನ ಪಾತ್ರ ಮಾಡಿದ ಹಿರಿಯ ಕಲಾವಿದೆ ಬಿ. ಜಯಶ್ರೀ ಜೊತೆ ಮನೋಜ್ಞ ಅಭಿನಯ ನೀಡಿದರು.
ಬೆಂಗಳೂರು(ಅ.16): ಹಲವು ವರ್ಷಗಳ ಬಳಿಕ ಸಚಿವೆ ಉಮಾಶ್ರೀ ಇಂದು ಬಣ್ಣ ಹಚ್ಚಿದ್ದರು. ಬೆಂಗಳೂರಿನಲ್ಲಿ ಇಂದು ಬಿ. ಜಯಮ್ಮ ಜನ್ಮಶತಮಾನೋತ್ಸವ ಸಮಾರೋಪ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸದಾರಮೆ ನಾಟಕ ಪ್ರದರ್ಶನದಲ್ಲಿ ಸದಾರಮೆ ಪಾತ್ರವನ್ನು ಸಚಿವೆ ಉಮಾಶ್ರೀ ನಿರ್ವಹಿಸಿದರು.
ಬಿ. ಜಯಮ್ಮ ಅವರು ನಿರ್ವಹಿಸಿದ ಸದಾರಮೆ ಪಾತ್ರಕ್ಕೆ ಯಶಸ್ವಿಯಾಗಿ ಜೀವ ತುಂಬಿದ ಉಮಾಶ್ರೀ , ಕಳ್ಳನ ಪಾತ್ರ ಮಾಡಿದ ಹಿರಿಯ ಕಲಾವಿದೆ ಬಿ. ಜಯಶ್ರೀ ಜೊತೆ ಮನೋಜ್ಞ ಅಭಿನಯ ನೀಡಿದರು.
