ನಾನು ಕೂಡ ನಮ್ಮ ತಂದೆತಾಯಿ ನೋಡಿದವರನ್ನೇ ಮದುವೆಯಾಗಿ ಎಷ್ಟು ಸುಖವಾಗಿದ್ದೇನೆ
ಧಾರವಾಡ(ಅ.13): ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನೀತಿ ಪಾಠ ಬೋಧನೆ ಮಾಡಿದ ಪ್ರಸಂಗ ಇಂದು ನಡೆಯಿತು.
ಡಾ. ಬಾಬು ಜಗಜೀವನರಾಮ್ ಅವರ ಅಧ್ಯಯನ ಕೇಂದ್ರ ಉದ್ಘಾಟನೆ ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ತಂದೆ ತಾಯಿ ಕನಸು ಕಟ್ಟಿ ಇಂತಹ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ. ಎಲ್ಲರೂ ಚೆನ್ನಾಗಿ ಓದಿ, ನೀವ್ಯಾರು ಲವ್ಗೆ ಬೀಳಬೇಡಿ. ಚೆನ್ನಾಗಿ ಓದಿದ ನಂತರ ಲವ್ ಮಾಡಿ. ಲವ್ ಮಾಡಬೇಕಿದ್ದರೆ ಎಲ್ಲ ಪದವಿ ಗಳಿಸಿ. ಕೆಲಸ ಗಿಟ್ಟಿಸಿಕೊಂಡಿ ಜೀವನಕ್ಕೆ ಅಗತ್ಯ ಭದ್ರತೆ ಮಾಡಿಕೊಂಡು ಬಳಿಕ ಚಿಂತನೆ ಮಾಡಿ. ನಾನು ಕೂಡ ನಮ್ಮ ತಂದೆತಾಯಿ ನೋಡಿದವರನ್ನೇ ಮದುವೆಯಾಗಿ ಎಷ್ಟು ಸುಖವಾಗಿದ್ದೇನೆ. ನೀವು ಕೂಡ ನನ್ನನ್ನೇ ಅನುಸರಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
