ಎಲ್ಲರೂ ಫುಲ್ ಜೋಶ್ನಲ್ಲಿ ಕುರುಬರು ನಾವು ಕುರುಬರು ಹಾಡಿಗೆ ಹೆಜ್ಜೆ ಹಾಕಿದರು.
ಇವತ್ತು ಬೀದರ್ನಲ್ಲಿ ಸಚಿವರು , ಶಾಸಕರು ಭರ್ಜರಿ ಡ್ಯಾನ್ಸ್ ಮಾಡಿದರು. ಎಲ್ಲರೂ ಫುಲ್ ಜೋಶ್ನಲ್ಲಿ ಕುರುಬರು ನಾವು ಕುರುಬರು ಹಾಡಿಗೆ ಹೆಜ್ಜೆ ಹಾಕಿದರು. ಇದು ಬೀದರ್ ನಲ್ಲಿ ಕನಕದಾಸ ಜಯಂತಿ ನಿಮಿತ್ತ ನಗರದ ಅಂಬೇಡ್ಕರ ವೃತದಿಂದ ರಂಗ ಮಂದಿರವರೆಗೆ ನಡೆದ ಮೆರವಣಿಗೆಯಲ್ಲಿ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಡಾನ್ಸ್ ಮಾಡಿದರು.ಇನ್ನೂ ಸಚಿವರಿಗೆ ಬೀದರ್ ಶಾಸಕ ರಹಿಂ ಖಾನ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಸಾಥ್ ನೀಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾರತಬಾಯಿ ಕೊಡಂಬಲ ಕೂಡ ಹೆಜ್ಜೆ ಹಾಕಿ ಗಮನ ಸೆಳೆದರು.
