ಬಳ್ಳಾರಿಯ  ಒಂದು ಹಿಡಿ ಮಣ್ಣಿಗೂ ಚಿನ್ನದ ಬೆಲೆ ಎಂಬ ಮಾತಿದೆ. ಅಷ್ಟೇ ಅಲ್ಲ ಅನಿಯಮಿತ, ಅವೈಜ್ಞಾನಿಕ, ಅಕ್ರಮ ಗಣಿಗಾರಿಕೆಯಿಂದ ಮೆರೆದಿದ್ದ ಜಿಲ್ಲೆ ಬಳ್ಳಾರಿ. ಅಕ್ರಮ ಗಣಿಗಾರಿಕೆ ಪರಿಣಾಮ ಖಾಸಗಿ ಗಣಿ ಕಂಪನಿ ಮಾಲೀಕರು ಹೊಂದಿದ್ದ  ಮೈನಿಂಗ್​'ನ್ನು  ಸಿ ಕೆಟಗರಿ ಪಟ್ಟಿಗೆ ಸೇರಿಸಿ ಲೀಜ್‍ನ್ನು' ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು. ಇದರಿಂದ ಅಕ್ರಮ ಗಣಿಗಾರಿಕೆ ನಡೆಸಿದ 51 ಗಣಿ ಕಂಪನಿಗಳು ಹೊಂದಿದ್ದ ಗಣಿ ಪ್ರದೇಶದ ಲೀ'ಜ್‍ನ್ನು ರದ್ದುಪಡಿಸಿ ಅವನ್ನು ಹರಾಜು ಮೂಲಕ ನೀಡಲು ಸೂಚಿಸಲಾಗಿತ್ತು. ಅದರಲ್ಲಿ 14 ಗಣಿ ಪ್ರದೇಶಗಳನ್ನು 50 ವರ್ಷಗಳಿಗೆ ಹರಾಜು ಮಾಡಲು ರಾಜ್ಯದ ಗಣಿ ಇಲಾಖೆ ಮುಂದಾಗಿದೆ.

ಬಳ್ಳಾರಿ(ಅ.09): ಮೈನಿಂಗ್ ಮಾಡಲು ಗಣಿ ಮಾಲಿಕರೇ ನಿರಾಸಕ್ತಿ ತೋರುತ್ತಿದ್ದಾರೆ. ಗಣಿಗಾರಿಕೆ ಮಾಡಲು ಮುಗಿಬೀಳುತ್ತಿದ್ದ ಗಣಿಮಾಲೀಕರು ಇದೀಗ ಸುಮ್ಮನಿದ್ದಾರೆ. ಏಕೆ ಗೊತ್ತಾ? ಹಾಗಾದ್ರೆ ಈ ಸ್ಟೋರಿ ಓದಿ

ಗಣಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗದ ರೆಡ್ಡಿ ಕಂಪನಿ

ಬಳ್ಳಾರಿಯ ಒಂದು ಹಿಡಿ ಮಣ್ಣಿಗೂ ಚಿನ್ನದ ಬೆಲೆ ಎಂಬ ಮಾತಿದೆ. ಅಷ್ಟೇ ಅಲ್ಲ ಅನಿಯಮಿತ, ಅವೈಜ್ಞಾನಿಕ, ಅಕ್ರಮ ಗಣಿಗಾರಿಕೆಯಿಂದ ಮೆರೆದಿದ್ದ ಜಿಲ್ಲೆ ಬಳ್ಳಾರಿ. ಅಕ್ರಮ ಗಣಿಗಾರಿಕೆ ಪರಿಣಾಮ ಖಾಸಗಿ ಗಣಿ ಕಂಪನಿ ಮಾಲೀಕರು ಹೊಂದಿದ್ದ ಮೈನಿಂಗ್​'ನ್ನು ಸಿ ಕೆಟಗರಿ ಪಟ್ಟಿಗೆ ಸೇರಿಸಿ ಲೀಜ್‍ನ್ನು' ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು. ಇದರಿಂದ ಅಕ್ರಮ ಗಣಿಗಾರಿಕೆ ನಡೆಸಿದ 51 ಗಣಿ ಕಂಪನಿಗಳು ಹೊಂದಿದ್ದ ಗಣಿ ಪ್ರದೇಶದ ಲೀ'ಜ್‍ನ್ನು ರದ್ದುಪಡಿಸಿ ಅವನ್ನು ಹರಾಜು ಮೂಲಕ ನೀಡಲು ಸೂಚಿಸಲಾಗಿತ್ತು. ಅದರಲ್ಲಿ 14 ಗಣಿ ಪ್ರದೇಶಗಳನ್ನು 50 ವರ್ಷಗಳಿಗೆ ಹರಾಜು ಮಾಡಲು ರಾಜ್ಯದ ಗಣಿ ಇಲಾಖೆ ಮುಂದಾಗಿದೆ.

ಹರಾಜಿನಲ್ಲಿ ಭಾಗಿಯಾದ ಗಣಿ ಮಾಲೀಕರು

ಅಕ್ರಮ ಗಣಿಗಾರಿಕೆಯಿಂದ ಸಿಇಸಿ ಮೂಲಕ ಸಿ ಕೆಟಗರಿ ಪಟ್ಟಿಯಲ್ಲಿದ್ದ 51 ಗಣಿ ಪ್ರದೇಶಗಳ ಪೈಕಿ 14 ಗಣಿ ಪ್ರದೇಶಗಳ ಈ ಹರಾಜು ಪ್ರಕ್ರಿಯೆ ಮುಗಿದಿದೆ. 14ರ ಪೈಕಿ 7 ಮಾತ್ರ ಹರಾಜಾಗಿದ್ದು, ಉಳಿದ 7 ಗಣಿ ಪ್ರದೇಶಗಳ ಹರಾಜಿಗೆ ಯಾರೂ ಮುಂದೆ ಬಂದಿಲ್ಲ. ಹರಾಜಾದ ಗಣಿಗಳಿಂದ ಬರುವ 50 ವರ್ಷಗಳಲ್ಲಿ 30 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆಯಿದೆ ಎಂದು ಗಣಿ ಇಲಾಖೆ ತಿಳಿಸಿದೆ.

ಹರಾಜಾಗದೇ ಇರುವ ಗಣಿ ಪ್ರದೇಶ

ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ,

ರಾಮಗಡ್ ಮೈನ್ಸ್ ಅಂಡ್ ಮಿನೆರಲ್ಸ್ ಪ್ರೈ.ಲಿ.

ಬಿ.ಆರ್. ಯೋಗೇಂದ್ರನಾಥ್ ಸಿಂಗ್ 

ಮೆ.ನಿಧಿ ಮೈನಿಂಗ್ ಕಂ. 

ಮೆ.ಎಸ್.ಬಿ. ಮಿನೆರಲ್ಸ್

ಮೆ.ಮಿನೆರಲ್ ಮೈನ್ಸ್ ಅಂಡ್ ಟ್ರೇಡರ್ಸ್

ಕೆಲ ವರುಷಗಳ ಹಿಂದೆ ಮೈನಿಂಗ್ ಲೀಸ್'ಗಾಗಿ ದೆಹಲಿಯವರೆಗೆ ದೊಡ್ಡ ಲಾಬಿ ನಡೆಸುತ್ತಿದ್ದ ಗಣಿ ಧಣಿಗಳು ಇದೀಗ ಗಣಿ ಪ್ರದೇಶ ಪಡೆಯಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಬಹುಶಃ ಸಾಕಷ್ಟು ಕಾನೂನು ಕಿರಿಕಿರಿಗಳ ಮಧ್ಯೆ ಗಣಿಗಾರಿಕೆ ಸಹವಾಸವೇ ಬೇಡವೆಂಬ ನಿರ್ಧಾರಕ್ಕೆ ಗಣಿ ಮಂದಿ ಬಂದಂತಿದೆ ಎನಿಸುತ್ತದೆ.