ವಿಶ್ವದ ಅರ್ಧದಷ್ಟು ಸಂಪತ್ತು ಕೋಟ್ಯಧೀಶರ ಬಳಿ

Millionaires Now Own Half of World's Personal Wealth
Highlights

ಷೇರು ಸೂಚ್ಯಂಕಗಳ ಏರಿಕೆ, ಕರೆನ್ಸಿ ಮೌಲ್ಯಗಳ ವೃದ್ಧಿಯಿಂದಾಗಿ ವಿಶ್ವದ ಜನರ ಖಾಸಗಿ ಸಂಪತ್ತು 2016ನೇ ಸಾಲಿನಲ್ಲಿ ಶೇ.12ರ ಬಲಿಷ್ಠ ಪ್ರಗತಿ ಸಾಧಿಸಿದ್ದು, 13 ಸಾವಿರ ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ವಿಶೇಷ ಎಂದರೆ, ಒಟ್ಟಾರೆ ಖಾಸಗಿ ಸಂಪತ್ತಿನ ಪೈಕಿ ಅರ್ಧದಷ್ಟು ಮಿಲಿಯನೇರ್‌  (ಕೋಟ್ಯಧೀಶರು)ಗಳ ಬಳಿಯೇ ಇದೆ ಎಂದು ವರದಿಯೊಂದು ತಿಳಿಸಿದೆ.
 

ನವದೆಹಲಿ: ಷೇರು ಸೂಚ್ಯಂಕಗಳ ಏರಿಕೆ, ಕರೆನ್ಸಿ ಮೌಲ್ಯಗಳ ವೃದ್ಧಿಯಿಂದಾಗಿ ವಿಶ್ವದ ಜನರ ಖಾಸಗಿ ಸಂಪತ್ತು 2016ನೇ ಸಾಲಿನಲ್ಲಿ ಶೇ.12ರ ಬಲಿಷ್ಠ ಪ್ರಗತಿ ಸಾಧಿಸಿದ್ದು, 13 ಸಾವಿರ ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ವಿಶೇಷ ಎಂದರೆ, ಒಟ್ಟಾರೆ ಖಾಸಗಿ ಸಂಪತ್ತಿನ ಪೈಕಿ ಅರ್ಧದಷ್ಟು ಮಿಲಿಯನೇರ್‌  (ಕೋಟ್ಯಧೀಶರು)ಗಳ ಬಳಿಯೇ ಇದೆ ಎಂದು ವರದಿಯೊಂದು ತಿಳಿಸಿದೆ.

2012ರಲ್ಲಿ ನಡೆದ ಅಧ್ಯಯನದ ಸಂದರ್ಭದಲ್ಲಿ ಒಟ್ಟಾರೆ ಖಾಸಗಿ ಸಂಪತ್ತಿನ ಮೌಲ್ಯದ ಶೇ.45ರಷ್ಟುಕೋಟ್ಯಧೀಶರು ಹಾಗೂ ಬಿಲಿಯನೇರ್‌ (ಸಹಸ್ರ ಕೋಟ್ಯಧೀಶರು)ಗಳ ಬಳಿ ಇತ್ತು. ಅದು ಈಗ ಏರಿಕೆ ಕಂಡಿದೆ ಎಂದು ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಕೋಟ್ಯಧೀಶರ ಸಂಪತ್ತು ಏರಿಕೆಯಾಗಿದೆ ಎಂಬ ಕಾರಣಕ್ಕೆ ಬಡವರು ಮತ್ತಷ್ಟುಬಡವರಾಗುತ್ತಿದ್ದಾರೆ ಎಂದಲ್ಲ. ಪ್ರತಿಯೊಬ್ಬರೂ ಶ್ರೀಮಂತರಾಗುತ್ತಿದ್ದಾರೆ. ಸಿರಿವಂತರು ಅತ್ಯಂತ ವೇಗದಲ್ಲಿ ಮತ್ತಷ್ಟುಶ್ರೀಮಂತರಾಗುತ್ತಿದ್ದಾರೆ ಎಂದು ವರದಿಯ ಲೇಖಕರಾದ ಅನ್ನಾ ಜಾಕ್ಜೆವೆಸ್ಕಿ ತಿಳಿಸಿದ್ದಾರೆ.

ಕೋಟ್ಯಧೀಶರು ಹಾಗೂ ಸಹಸ್ರ ಕೋಟ್ಯಧೀಶರ ಸಂಖ್ಯೆಯಲ್ಲಿ ಜಪಾನ್‌ ಅನ್ನು ಹಿಂದಿಕ್ಕಿ ಚೀನಾ ಎರಡನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಮೊದಲ ಸ್ಥಾನದಲ್ಲಿ ಉಳಿದಿದೆ ಎಂದು ತಿಳಿಸಿದ್ದಾರೆ.

loader