ಹಾಲಿನ ದರ ಇಳಿಸಿದ್ದಕ್ಕೆ ಕಾರಣ ಏನು..?

First Published 12, Jun 2018, 7:31 AM IST
Milk price dip In Karnataka
Highlights

ರಾಜ್ಯದಲ್ಲಿ ಕೆಲವು ಹಾಲು ಉತ್ಪಾದಕರ ಒಕ್ಕೂಟಗಳು ಹಾಲಿನ ದರ ಕಡಿಮೆ ಮಾಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟಒಕ್ಕೂಟದಿಂದ ದರ ಕಡಿಮೆ ಮಾಡಲು ಕಾರಣ ಕೇಳುತ್ತೇನೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದ್ದಾರೆ.

ಬೆಂಗಳೂರು :  ರಾಜ್ಯದಲ್ಲಿ ಕೆಲವು ಹಾಲು ಉತ್ಪಾದಕರ ಒಕ್ಕೂಟಗಳು ಹಾಲಿನ ದರ ಕಡಿಮೆ ಮಾಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟಒಕ್ಕೂಟದಿಂದ ದರ ಕಡಿಮೆ ಮಾಡಲು ಕಾರಣ ಕೇಳುತ್ತೇನೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಒಕ್ಕೂಟಗಳು ಹಾಲು ಉತ್ಪಾದನೆ ಹೆಚ್ಚಾಗಿರುವ ಕಾರಣ ನೀಡಿ 2 ರು.ವರೆಗೆ ಹಾಲಿನ ದರ ಕಡಿಮೆ ಮಾಡಿವೆ ಎಂಬ ಮಾಹಿತಿ ಬಂದಿದೆ. ಹಾಲಿನ ದರ ಕಡಿಮೆ ಮಾಡಲು ಕಾರಣವೇನು ಎಂಬುದರ ಬಗ್ಗೆ ಒಕ್ಕೂಟಗಳಿಂದ ಮಾಹಿತಿ ಪಡೆಯುತ್ತೇನೆ. ಮಾಹಿತಿ ಪಡೆದು ರೈತರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಾಲ ಮನ್ನಾ ಕುರಿತು ವರದಿ:  ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಹಾಗೂ ಹೊಸ ಸಾಲ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಸಾಲ ಮನ್ನಾ ನೆಪದಲ್ಲಿ ಹೊಸ ಸಾಲ ನೀಡುವುದನ್ನು ತಡೆಯಬಾರದು ಎಂದು ನಿರ್ದೇಶನ ನೀಡುತ್ತೇನೆ. ಸಾಲ ಮನ್ನಾ ಹಾಗೂ ಹೊಸ ಸಾಲ ನೀಡುವ ಕುರಿತು ಮಾಹಿತಿ ಕಲೆ ಹಾಕಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಬಂಡೆಪ್ಪ ಕಾಶೆಂಪೂರ್‌ ಹೇಳಿದರು.

loader