‘ಡಾನ್’ ಪತ್ರಿಕೆಗೆ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ಪ್ರಧಾನಿ ಸಚಿವಾಲಯದ ವಿರುದ್ಧ ಸೇನಾ ವಲಯ ಆಕ್ಷೇಪಿಸಿತ್ತು. ಅದು ರಾಷ್ಟ್ರೀಯ ಭದ್ರತಾ ನೀತಿಯ ಉಲ್ಲಂಘನೆ ಮತ್ತು ಸಿರಿಲ್ ಅಲ್ಮೇಡಾ ಪ್ರಕಟಿಸಿರುವ ಮಾಹಿತಿ ತಪ್ಪು ಮತ್ತು ತಿರುಚಲ್ಪಟ್ಟದ್ದು ಹೇಳಿಕೆಯಲ್ಲಿ ಸೇನೆ ಆಕ್ಷೇಪಿಸಿತ್ತು.

ನವದೆಹಲಿ(ಅ.18): ಪಾಕಿಸ್ತಾನದಲ್ಲಿ ಸದ್ಯ ಅಕಾರದಲ್ಲಿರುವ ನವಾಜ್ ಷರೀಫ್ ನೇತೃತ್ವದಲ್ಲಿನ ಸರ್ಕಾರಕ್ಕೆ ಅಲ್ಲಿನ ಪ್ರಬಲ ಸೇನೆಯಿಂದಲೇ ಆಪತ್ತು ಎದುರಾಗುವ ಸಾಧ್ಯತೆಗಳಿವೆ. ಹೀಗೆಂದು ಮೂಲಗಳನ್ನು ಉಲ್ಲೇಖಿಸಿ ‘ಎಎನ್‌ಐ’ ವರದಿ ಮಾಡಿದೆ.

ಪಾಕ್‌ನ ಪ್ರಭಾವಿ ಪತ್ರಿಕೆಯಾಗಿರುವ ‘ಡಾನ್’ನಲ್ಲಿ ಇತ್ತೀಚೆಗೆ ಸರ್ಕಾರ ಮತ್ತು ಸೇನೆಯ ನಡುವೆ ಅಂತರ ಹೆಚ್ಚಿದೆ ಎಂದು ಪತ್ರಕರ್ತ ಸಿರಿಲ್ ಅಲ್ಮೇಡಾ ಬರೆದಿದ್ದ ವರದಿಯಿಂದ ಸೇನೆಯ ಹಿರಿಯ ಅಕಾರಿಗಳು ಕ್ರುದ್ಧಗೊಂಡಿದ್ದರು. ಅ.14ರಂದು ರಾವಲ್ಪಿಂಡಿಯಲ್ಲಿ ನಡೆದಿದ್ದ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಪ್ರಧಾನಿ ನವಾಜ್ ಷರ್ೀ ನೇತೃತ್ವದ ಸರ್ಕಾರದ ವಿರುದ್ಧ ಪ್ರಬಲ ಆಕ್ರೋಶ ವ್ಯಕ್ತವಾಗಿದೆ ಎಂದು ವರದಿ ಮಾಡಿದೆ.

‘ಡಾನ್’ ಪತ್ರಿಕೆಗೆ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ಪ್ರಧಾನಿ ಸಚಿವಾಲಯದ ವಿರುದ್ಧ ಸೇನಾ ವಲಯ ಆಕ್ಷೇಪಿಸಿತ್ತು. ಅದು ರಾಷ್ಟ್ರೀಯ ಭದ್ರತಾ ನೀತಿಯ ಉಲ್ಲಂಘನೆ ಮತ್ತು ಸಿರಿಲ್ ಅಲ್ಮೇಡಾ ಪ್ರಕಟಿಸಿರುವ ಮಾಹಿತಿ ತಪ್ಪು ಮತ್ತು ತಿರುಚಲ್ಪಟ್ಟದ್ದು ಹೇಳಿಕೆಯಲ್ಲಿ ಸೇನೆ ಆಕ್ಷೇಪಿಸಿತ್ತು. ಜತೆಗೆ ಐದು ದಿನಗಳ ಒಳಗಾಗಿ ಯಾವ ಮೂಲದಿಂದ ಮಾಹಿತಿ ಸೋರಿಕೆಯಾಗಿದೆ ಎಂಬ ಅಂಶವನ್ನು ಪತ್ತೆ ಹಚ್ಚಬೇಕೆಂದು ಷರೀಫ್ ಸರ್ಕಾರಕ್ಕೆ ತಾಕೀತು ಕೂಡ ಮಾಡಲಾಗಿತ್ತು. ಆದರೆ ತಪ್ಪು ಮತ್ತು ತಿರುಚಲ್ಪಟ್ಟ ಸುದ್ದಿ ರಾಷ್ಟ್ರೀಯ ಭದ್ರತೆಗೆ ಹೇಗೆ ಅಪಾಯಕಾರಿ ಎಂಬುದನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿಲ್ಲ.

ಈ ಬೆಳವಣಿಗೆಯ ಬಳಿಕ ಈ ವರದಿಯನ್ನು ಪರಿಶೀಲಿಸಲಾಗಿದೆ ಮತ್ತು ಮರುಪರಿಶೀಲಿಸಲಾಗಿದೆ ಎಂದು ‘ಡಾನ್’ ಪತ್ರಿಕೆಯ ಸಂಪಾದಕರು ತಮ್ಮ ವರದಿಯನ್ನು ಸಮರ್ಥಿಸಿಕೊಂಡಿದ್ದರು. ಐದು ದಿನಗಳೊಳಗೆ ಪ್ರಧಾನಿ ಸಚಿವಾಲಯ ಸಮಂಜಸ ವರದಿ ಸಲ್ಲಿಸಬೇಕಾಗಿತ್ತು. ಮೊದಲು ನಿರ್ಗಮನ ನಿಯಂತ್ರಣ ಪಟ್ಟಿಯಲ್ಲಿ ಅಲ್ಮೇಡಾ ಹೆಸರು ಸೂಚಿಸಿದ್ದ ಪಿಎಂಒ ಬಳಿಕ, ಆ ಆದೇಶ ಮತ್ತೆ ಹಿಂದಕ್ಕೆ ಪಡೆದು ಗೊಂದಲ ಸೃಷ್ಟಿಸಿತ್ತು. ಇದರ ಜತೆಗೆ ಪಠಾಣ್‌ಕೋಟ್ ಮತ್ತು ಮುಂಬೈ ದಾಳಿಗೆ ಕಾರಣರಾಗಿರುವ ಉಗ್ರರ ಜತೆಗೆ ಸಂಪರ್ಕ ಇಟ್ಟುಕೊಳ್ಳಬೇಡಿ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರ್ೀ ಹೇಳಿದ್ದು ಸೇನೆಯನ್ನು ಕೆರಳಿಸಿತ್ತು. ಉಗ್ರರನ್ನು ಜೈಲಿಗೆ ಕಳುಹಿಸಲು ಷರ್ೀ ಸರ್ಕಾರ ಸೇನೆಯ ಸಹಕಾರ ಬಯಸುತ್ತಿದೆ. ಆದರೆ ಸೇನೆ ಅದನ್ನು ತಡೆಯುತ್ತಿದೆ. ಸಣ್ಣ ಗ್ಯಾಂಗ್‌ಸ್ಟರ್‌ಗಳೂ ಪಾಕ್ ಸರ್ಕಾರದ ಭಯ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸೇನೆ ನಡುವೆ ಅಂತರ ಹೆಚ್ಚಾಗುತ್ತಿದೆ.

ಇದರ ಜತೆಗೆ ಪನಾಮಾ ದಾಖಲೆಗಳಲ್ಲಿ ಷರ್ೀ ಕುಟುಂಬ ಸದಸ್ಯರು ತರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿರುವ ವಿವಾದ, ಸೇನೆಯ ಹಾಲಿ ಮುಖ್ಯಸ್ಥ ಜ.ರಹೀಲ್ ಷರೀಫ ಕೂಡ ಪಾಕ್ ಪ್ರಧಾನಿ ಜತೆಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಮುಂದಿನ ತಿಂಗಳ ಅಂತ್ಯಕ್ಕೆ ಅವರು ಸೇವಾ ನಿವೃತ್ತಿ ಹೊಂದಲಿದ್ದಾರೆ. ಅವರ ಸೇವೆಯನ್ನು ವಿಸ್ತರಿಸಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ಸರ್ಕಾರ ನಿರ್ಧಾರ ಕೈಗೊಂಡಿಲ್ಲ.