'ಗಂಗೂಲಿ ಟೀಂ ಇಂಡಿಯಾದ ನಾಯಕರಾದ ಬಳಿಕ ತಂಡದಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಉಮೇಶ್ ಯಾದವ್ ಅವರಂತಹ ಆಟಗಾರರು ಈಗ ಟೀಂ ಇಂಡಿಯಾದಲ್ಲಿದ್ದಾರೆ ಎಂದರೆ ಅದಕ್ಕೆ ಸೌರವ್ ಗಂಗೂಲಿ ಹಾಕಿಕೊಟ್ಟ ಅಡಿಪಾಯವೇ ಕಾರಣ. ವೈಯುಕ್ತಿಕ ಪ್ರತಿಭೆಯಿಂದಾಗಿ ಈಗ ದೇಶದ ನಾನಾ ಮೂಲೆಗಳಿಂದ ಬಂದ ಆಟಗಾರರು ಟೀಂ ಇಂಡಿಯಾದಲ್ಲಿ ಕಾಣಸಿಗುತ್ತಾರೆ. ಗಂಗೂಲಿ ಬರುವುದಕ್ಕಿಂತ ಮುಂಚೆ ಕೇವಲ ಐದಾರು ರಾಜ್ಯಗಳ ಆಟಗಾರರು ಮಾತ್ರ  ಟೀಂ ಇಂಡಿಯಾದ ಮೇಲೆ ಹಿಡಿತ ಸಾಧಿಸಿದ್ದರು' ಎಂದು ನಾದೆಲ್ಲಾ ಹೇಳಿದ್ದಾರೆ. 

ನವದೆಹಲಿ(ನ.10): ಸೌರವ್ ಗಂಗೂಲಿಗೆ ಮೈಕ್ರೋಸಾಫ್ಟ್ ಕಂಪನಿಯನ್ನು ಮುನ್ನಡೆಸುವ ಸಾಮರ್ಥ್ಯವಿದೆ ಎಂದು ಹಾಲಿ ಸಿಇಓ ಸತ್ಯ ನಾದೆಲ್ಲಾ ಎನ್ನುವ ಮೂಲಕ ದಾದಾನ ನಾಯಕತ್ವ ಗುಣವನ್ನು ಕೊಂಡಾಡಿದ್ದಾರೆ.

‘ಗಂಗೂಲಿ ಅವರ ನಾಯಕತ್ವ ಗುಣಗಳು ನನ್ನ ಮೇಲೆ ಪ್ರಭಾವ ಬೀರಿದೆ. ಗಂಗೂಲಿ ನಾಯಕತ್ವ ವಹಿಸಿಕೊಳ್ಳುವ ಮುನ್ನ ಭಾರತ ತಂಡದಲ್ಲಿ 5-6 ರಾಜ್ಯದವರ ಪ್ರಭಾವವಿತ್ತು. ಆದರೆ, ಗಂಗೂಲಿ ನಾಯಕರಾದ ಬಳಿಕ ವಿವಿಧ ರಾಜ್ಯಗಳ ಆಟಗಾರರಿಗೆ ಅವಕಾಶ ದೊರೆಯಿತು. ಇದೇ ಸಂದರ್ಭದಲ್ಲಿ ಧೋನಿ ಸಹ ತಂಡಕ್ಕೆ ಸೇರ್ಪಡೆಗೊಂಡರು. ಪ್ರತಿಭಾನ್ವಿತರಿಗೆ ಹೆಚ್ಚು ಅವಕಾಶ ಸಿಗುವಂತೆ ಮಾಡಿದ್ದೇ ಗಂಗೂಲಿ’ ಎಂದು ಹೇಳಿದ್ದಾರೆ.

ಸತ್ಯ ನಾದೆಲ್ಲ ಅವರು ತಾವು ಬರೆದ 'ಹಿಟ್ ರಿಫ್ರೆಸ್' ಪುಸ್ತಕದ ಪ್ರಚಾರಕ್ಕಾಗಿ ಎರಡು ದಿನದ ಭಾರತ ಪ್ರವಾಸದಲ್ಲಿರುವ ಅವರು, 'ಪಶ್ಚಿಮ ಬಂಗಾಳದಿಂದ ಬಂದ ಸೌರವ್ ಗಂಗೂಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದು ಒಂದು ಅನಿರೀಕ್ಷಿತವಾದದ್ದು' ಎಂದು ಹೇಳಿದ್ದಾರೆ.