ಸ್ಫೋಟಗೊಂಡ ಮೊಬೈಲ್ ಚೀನಾ ರೆಡ್ ಮೀ ಕಂಪನಿಯದಾಗಿದೆ. ಹಲವು ಫೀಚರ್'ಗಳನ್ನು ಹೊಂದಿರುವ ಈ ಮೊಬೈಲ್ ಇತರ ಕಂಪನಿಯ ಮೊಬೈಲ್'ಗೆ ಹೋಲಿಸಿದರೆ ಕಡಿಮೆ ಬೆಲೆಯದಾಗಿದೆ.
ಕೊಪ್ಪಳ(ನ.06): ಜೇಬಲ್ಲಿ ಮೊಬೈಲ್ ಇಟ್ಟುಕೊಳ್ಳುವವರಿಗೆ ಕಾದಿದೆ ಶಾಕಿಂಗ್ ನ್ಯೂಸ್. ಯುವಕನೊಬ್ಬ ಜೇಬಲ್ಲಿ ಮೊಬೈಲ್ ಇಟ್ಟುಕೊಂಡಿದ್ದಾಗ ಸ್ಫೋಟಗೊಂಡು ಕಾಲಿಗೆ ತೀರ್ವವಾದ ಗಾಯವಾಗಿದೆ.
ಕೊಪ್ಪಳದ ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ಹನುಮೇಶ ತಾವರಗೇರ ಎಂಬ ಯುವಕನೊಬ್ಬ ಜೇಬಲ್ಲಿ ಮೊಬೈಲ್ ಇಟ್ಟುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಫೋನ್ ಸ್ಫೋಟಗೊಂಡಿದೆ. ಕಾಲಿಗೆ ತೀರ್ವವಾಗಿ ಗಾಯಗೊಂಡ ಹನುಮೇಶನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.
ಸ್ಫೋಟಗೊಂಡ ಮೊಬೈಲ್ ಚೀನಾ ರೆಡ್ ಮೀ ಕಂಪನಿಯದಾಗಿದೆ. ಹಲವು ಫೀಚರ್'ಗಳನ್ನು ಹೊಂದಿರುವ ಈ ಮೊಬೈಲ್ ಇತರ ಕಂಪನಿಯ ಮೊಬೈಲ್'ಗೆ ಹೋಲಿಸಿದರೆ ಕಡಿಮೆ ಬೆಲೆಯದಾಗಿದೆ. ಫೋನ್ ಬಿಡುಗಡೆಯದಾಗಿನಿಂದ ಈ ಮೊಬೈಲ್'ನಿಂದ ಹಲವು ದೂರುಗಳು ಬರುತ್ತಿವೆ. ವಿಶ್ವದ ನಾನಾ ಕಡೆ ಮೊಬೈಲ್ ಸ್ಫೋಟಗೊಳ್ಳುವ ದೂರುಗಳು ಬರುತ್ತಿದ್ದು, ಭಾರತದ ನಾನಾ ಕಡೆ ಸ್ಫೋಟಗೊಳ್ಳುವ ವಿಷಯ ಸಾಮಾನ್ಯವಾಗಿದೆ. ಕರ್ನಾಟಕದ ವಿಜಾಪುರದಲ್ಲಿ ರೆಡ್'ಮೀ ಸಂಸ್ಥೆಯ ಮೊಬೈಲ್ ಸ್ಫೋಟಗೊಂಡಿತ್ತು. ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಬಾಕ್ಸ್ ತೆರದ ಕೂಡಲೇ ಮೊಬೈಲ್ ಬ್ಲ್ಯಾಸ್ಟ್ ಆಗಿತ್ತು.

