ಮೆಟ್ಟೂರು 2ನೇ ಸಲ ಭರ್ತಿ: 1.34 ಲಕ್ಷ ಕ್ಯುಸೆಕ್‌ ಒಳಹರಿವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 10:16 AM IST
Mettur Dam Overflow Second Time
Highlights

ಕರ್ನಾಟಕದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವು ಇರುವುದರಿಂದ ಮೆಟ್ಟೂರು ಜಲಾಶಯ 2ನೇ ಬಾರಿ ಭರ್ತಿಯಾಗಿದೆ. 

ಕೊಯಮತ್ತೂರು: ಈ ವರ್ಷದ ಮುಂಗಾರು ಅವಧಿಯಲ್ಲಿ ಮಳೆ ಚೆನ್ನಾಗಿ ಸುರಿಯುತ್ತಿರುವುದರಿಂದ, ತಮಿಳುನಾಡಿನ ಮೆಟ್ಟೂರು ಅಣೆಕಟ್ಟು ಎರಡನೇ ಬಾರಿಗೆ ಗರಿಷ್ಠ ಮಟ್ಟವನ್ನು ತಲುಪಿದೆ. 

ಕರ್ನಾಟಕದ ಜಲಾಶಯಗಳಿಂದ ಭಾರಿ ಹೆಚ್ಚುವರಿ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಜು.23ರ ಬಳಿಕ, ಇದೀಗ ಮತ್ತೊಮ್ಮೆ ಮೆಟ್ಟೂರು ಅಣೆಕಟ್ಟು ಅದರ ಗರಿಷ್ಠ ಸಾಮರ್ಥ್ಯ 120 ಅಡಿ ಭರ್ತಿಯಾಗಿದೆ. 

ಸುಮಾರು 1.34 ಲಕ್ಷ ಕ್ಯುಸೆಕ್‌ ಒಳಹರಿವು ಇದ್ದಿದ್ದುದರಿಂದ ಶನಿವಾರ ಮಧ್ಯಾಹ್ನ 2 ಗಂಟೆಗೆ ಮೆಟ್ಟೂರು ಅಣೆಕಟ್ಟು ತುಂಬಿದೆ. ಕಾವೇರಿ ನದಿದಡ ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಹ ಮುನ್ನೆಚ್ಚರಿಕೆ ನೀಡಲಾಗಿತ್ತು. ನೀರು ಭರ್ತಿಯಾಗಿದ್ದರಿಂದ ಅಣೆಕಟ್ಟಿನ 16 ಗೇಟುಗಳನ್ನು ತೆರೆಯಲಾಗಿದೆ. ಅಣೆಕಟ್ಟಿನಿಂದ 1.10 ಲಕ್ಷ ಕ್ಯುಸೆಕ್‌ ಹೊರಬಿಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

loader