ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಡಿ. 24, 25 ಮತ್ತು 31 ರಂದು ‘ನಮ್ಮ ಮೆಟ್ರೋ’ ಸಂಚಾರದ ಅವಧಿಯನ್ನು ಹೆಚ್ಚಳ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಬೆಂಗಳೂರು (ಡಿ.24): ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಡಿ. 24, 25 ಮತ್ತು 31 ರಂದು ‘ನಮ್ಮ ಮೆಟ್ರೋ’ ಸಂಚಾರದ ಅವಧಿಯನ್ನು ಹೆಚ್ಚಳ ಮಾಡಲಾಗಿದೆ ಎಂದು ಬೆಂಗ ಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಮೈಸೂರು ರಸ್ತೆಯಿಂದ ಬೈಯ್ಯಪ್ಪನಹಳ್ಳಿ ಹಾಗೂ ಯಲಚೇನಹಳ್ಳಿಯಿಂದ ನಾಗಸಂದ್ರದ ಮಾರ್ಗಗಳಲ್ಲಿನ ಮೆಟ್ರೋ ಸಂಚಾರ ವನ್ನು ಹೆಚ್ಚಳ ಮಾಡಲಾಗಿದ್ದು, ಡಿ.24 ಮತ್ತು 25 ರ ರಾತ್ರಿ ಒಂದು ಗಂಟೆಯವರೆಗೂ ಡಿ.31 ಮತ್ತು ಜ.1 ರ ರಾತ್ರಿ 2 ಗಂಟೆಯವರೆಗೂ ಸಂಚಾರದ ಅವಧಿ ವಿಸ್ತರಿಲಾಗಿದೆ. ಎರಡೂ ಮಾರ್ಗಗಳಲ್ಲಿ ಕನಿಷ್ಠ 15 ನಿಮಿಷಕ್ಕೊಂದು ರೈಲು ಸಂಚರಿಸಲಿವೆ.