ಮೆಟ್ರೋ ಬಾಡಿಗೆ ಬೈಕ್ ಸೇವೆಗೆ ಭಾರೀ ಡಿಮ್ಯಾಂಡ್

Metro Rent Bike Service In Bengaluru
Highlights

ನಮ್ಮ ಮೆಟ್ರೋ ರೈಲಿನಂತೆಯೇ ಮೆಟ್ರೋ ಬೈಕ್ ಗಳಿಗೂ ಬೇಡಿಕೆ ಬಂದಿದೆ. ಬಾಡಿಗೆ ಬೈಕ್ ಸೇವೆ ಆರಂಭವಾದ ಒಂದೇ ವಾರದಲ್ಲಿ ಭಾರೀ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವಾರದಲ್ಲಿ ಸುಮಾರು 1500 ರೈಡ್‌ಗಳು ನಡೆದಿವೆ. ಇದರಿಂದ ಪ್ರೇರಿತವಾಗಿರುವ ಮೆಟ್ರೋ ಬೈಕ್ ಸಂಸ್ಥೆಯು, ಶೀಘ್ರದಲ್ಲೇ ನಗರದಲ್ಲಿ ಓಟಿಪಿ (ಅಂದರೆ, ಮೊಬೈಲ್‌ಗೆ ಬರುವ ಓಟಿಪಿ ನಂಬರ್ ಬಳಸಿ, ಬೈಕ್ ಸ್ವಿಚ್ ಆನ್ ಮಾಡಿ ಚಾಲನೆ ಮಾಡಬಹುದಾದ) ಬೈಕ್ ಸೇವೆ ಆರಂಭಿಸಲು ಸಜ್ಜಾಗಿದೆ.

ಬೆಂಗಳೂರು : ನಮ್ಮ ಮೆಟ್ರೋ ರೈಲಿನಂತೆಯೇ ಮೆಟ್ರೋ ಬೈಕ್ ಗಳಿಗೂ ಬೇಡಿಕೆ ಬಂದಿದೆ. ಬಾಡಿಗೆ ಬೈಕ್ ಸೇವೆ ಆರಂಭವಾದ ಒಂದೇ ವಾರದಲ್ಲಿ ಭಾರೀ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವಾರದಲ್ಲಿ ಸುಮಾರು 1500 ರೈಡ್‌ಗಳು ನಡೆದಿವೆ. ಇದರಿಂದ ಪ್ರೇರಿತವಾಗಿರುವ ಮೆಟ್ರೋ ಬೈಕ್ ಸಂಸ್ಥೆಯು, ಶೀಘ್ರದಲ್ಲೇ ನಗರದಲ್ಲಿ ಓಟಿಪಿ (ಅಂದರೆ, ಮೊಬೈಲ್‌ಗೆ ಬರುವ ಓಟಿಪಿ ನಂಬರ್ ಬಳಸಿ, ಬೈಕ್ ಸ್ವಿಚ್ ಆನ್ ಮಾಡಿ ಚಾಲನೆ ಮಾಡಬಹುದಾದ) ಬೈಕ್ ಸೇವೆ ಆರಂಭಿಸಲು ಸಜ್ಜಾಗಿದೆ.

ಮೆಟ್ರೋ ಬೈಕ್ ಸಂಸ್ಥೆ ಮೆಟ್ರೋ ಸಂಪರ್ಕ ಬಸ್ ಗಳ ಕೊರತೆ ನೀಗಿಸಲು ಫೆ.16ರಂದು ನಗರದ ಸುಮಾರು 10-12 ಮೆಟ್ರೋ ಸ್ಟೇಷನ್‌ಗಳಲ್ಲಿ ಅಂದಾಜು ಒಂದು ಸಾವಿರ ಬೈಕುಗಳ ಮೆಟ್ರೋ ಬೈಕ್ ಸೇವೆ ಆರಂಭಿಸಿತ್ತು. ಪ್ರತಿ ಕಿ.ಮೀ.ಗೆ 5ರು. ಬಾಡಿಗೆ ಪಡೆಯುತ್ತಿದೆ. ಮೆಟ್ರೋ ಬೈಕ್ ಸೇವೆ ಬಯಸುವ ಗ್ರಾಹಕರು ಮೆಟ್ರೋ ಬೈಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಈ ಸೇವೆ ಪಡೆಯಲು ಅನುಕೂಲ ಕಲ್ಪಿಸಲಾಗಿತ್ತು. ಸಾಫ್ಟ್‌ವೇರ್ ಕಂಪನಿ ಉದ್ಯೋಗಿಗಳು, ವಿವಿಧ ಕಂಪನಿಗಳ ನೌಕರರು ಈ ಸೇವೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಮೆಟ್ರೋ ನಿಲ್ದಾಣದಲ್ಲಿ ಕನಿಷ್ಠ 20ರಿಂದ25 ಬೈಕುಗಳಿವೆ.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 60ರಿಂದ 65 ಬೈಕುಗಳು, ಮೆಜೆಸ್ಟಿಕ್‌ನಲ್ಲಿ 30ರಿಂದ 35 ಬೈಕುಗಳು ಸೇರಿದಂತೆ ಪ್ರಮುಖ ನಿಲ್ದಾಣದಲ್ಲಿ ಅಗತ್ಯಕ್ಕೆ ತಕ್ಕಂತೆ ಬೈಕ್ ಸೇವೆ ನೀಡಲಾಗಿದೆ. 1500 ರೈಡ್‌ಗಳು: ರಾತ್ರಿ ವೇಳೆ ಮೆಟ್ರೋ ಬೈಕ್ ಸೇವೆಯನ್ನು ಪ್ರತಿದಿನ 500ರಿಂದ 528 ಮಂದಿ ಬಳಕೆ ಮಾಡುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಹೊಸ ರೈಡರ್ ಗಳು ಈ ಸೇವೆ ಉಪ ಯೋಗಿಸುತ್ತಿದ್ದಾರೆ. ಹೀಗೆ ಶೇ.40ರಿಂದ 45ರಷ್ಟು ಮಂದಿ ರಾತ್ರಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಉಳಿದಂತೆ ಸುಮಾರು 900ರಿಂದ 1000 ಮೆಟ್ರೋ ರೈಡ್‌ಗಳು ಹಗಲು ವೇಳೆಯಲ್ಲಿ ನಡೆಯುತ್ತಿವೆ. ಕೇವಲ ಒಂದೇ ವಾರಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬಂದಿದ್ದು, ಕಂಪನಿ ನಿರೀಕ್ಷಿಸಿದ್ದಕ್ಕಿಂತ ಅಧಿಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಮೆಟ್ರೋ ಬೈಕ್ ಕಂಪನಿ ಸಹ ಸಂಸ್ಥಾಪಕ ಜಿ.ಅನಿಲ್ ಮಾಹಿತಿ ನೀಡಿದ್ದಾರೆ.

ನೈಟ್‌ಪ್ಲಾನ್: ಮೆಟ್ರೋ ನಿಲ್ದಾಣದಿಂದ ಪ್ರಯಾಣಿ ಕರು ರಾತ್ರಿ ದ್ವಿಚಕ್ರ ವಾಹನ ಪಡೆದು ಮನೆಗೆ ತೆರಳಬಹುದು. ಇದಕ್ಕೆ ಪ್ರತಿ ಕಿ.ಮೀ.ಗೆ 6.50 ರು. ನಿಗದಿಪಡಿಸಲಾಗಿದೆ. ಆದರೆ ಮರುದಿನ ಕಚೇರಿಗೆ ಹೋಗುವ ಸಂದರ್ಭದಲ್ಲಿ ಬೈಕ್‌ನ್ನು ಹಿಂದಿರುಗಿಸಬೇಕು. ಆದರೆ, ಮೆಟ್ರೋ ಪ್ರಯಾಣಿಕರ ಮನೆ ಮೆಟ್ರೋ ನಿಲ್ದಾಣದಿಂದ ಏಳೆಂಟು ಕಿ.ಮೀ ವ್ಯಾಪ್ತಿಯಲ್ಲಿ ಇದ್ದರೆ ಒಳ್ಳೆಯದು. ಅದಕ್ಕೂ ಮುನ್ನಾ ಮೆಟ್ರೋ ಬೈಕ್ ಸಿಬ್ಬಂದಿಗೆ ಚಾಲನಾ ಪರವಾನಗಿ, ಆಧಾರ್ ಕಾರ್ಡ್ ಇತ್ಯಾದಿ ಗುರುತಿನ ಚೀಟಿ ತೋರಿಸಿ ಈ ಸೇವೆ ಪಡೆಯಬಹುದು.

15 ದಿನ, ತಿಂಗಳಿಗೂ ಬೈಕ್‌ಗಳು ಲಭ್ಯ: ದಿನ ದಿನವೂ ಬಾಡಿಗೆ ಪಾವತಿಸಲು ಸಾಧ್ಯವಿಲ್ಲ. ತಿಂಗಳು ಅಥವಾ 15 ದಿನ ಇಲ್ಲವೇ 10 ದಿನಕ್ಕೆ ಮಾತ್ರ ಬೈಕನ್ನು ಬಾಡಿಗೆಗೆ ಪಡೆಯಲು ಕೂಡ ಅವಕಾಶವಿದೆ. ಗ್ರಾಹಕರು ತಮಗೆ ಎಷ್ಟು ದಿನಕ್ಕೆ ಬೈಕ್ ಬೇಕು ಎಂದು ನಿರ್ಧರಿಸಬೇಕು. ಅದಕ್ಕೂ ಮುಂಚೆ ಎಷ್ಟು ಕಿಲೋ ಮೀಟರ್, ಎಷ್ಟು ದಿನ ಬಳಸುತ್ತೇವೆ ಎಂಬುದನ್ನು ಲೆಕ್ಕಾಚಾರ ಹಾಕಿ ಹಣ ಪಾವತಿಸಬೇಕು. ಅಲ್ಲದೇ ಬಾಡಿಗೆ ಹೊರತುಪಡಿಸಿ ದಿನದ ವೇಳೆ ಪ್ರತಿ ನಿಮಿಷಕ್ಕೆ 50 ಪೈಸೆಯಂತೆ ಪಾವತಿಸಬೇಕಾಗುತ್ತದೆ.

loader