ಮೆಲ್ಬೋರ್ನ್(ಜು.11) ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಪೋಸ್ಟ್ ಆಗಿದ್ದು ಆಸ್ಟ್ರೇಲಿಯಾದ ಮೆಲ್ಬೋರ್ನ್ ರೈಲ್ವೆಗೆ ಅರ್ಪಿಸಲಾಗಿದೆ!

ಎಣ್ಣೆ ತರಹದ ಪದಾರ್ಥವೊಂದನ್ನು ರೈಲಿನ ಮಧ್ಯಭಾಗದಲ್ಲಿ ಚೆಲ್ಲಿಕೊಂಡು ಅದರ ಮೇಲೆ ಈ ಮುನುಷ್ಯ ಬೆತ್ತಲೆಯಾಗಿ ಜಾರುಬಂಡಿ ಆಟ ಆಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಾಕಿರುವ ನಾಗರಿಕರು ಪ್ರಯಾಣಿಕರ ಸುರಕ್ಷತೆಯ ಪ್ರಶ್ನೆ ಮಾಡಿದ್ದಾರೆ.

ಕೊಟ್ಟ ಮಾತು ಉಳಿಸಿಕೊಂಡ ಪೂನಂ ಪಾಂಡೆ

ಬುಧವಾರ ಬೆಳಗ್ಗೆ ಈ ಘಟನೆ ನಡೆದಿರಬಹುದು ಎಂದು ಹೇಳಲಾಗಿದೆ. ಇಂಥ ಅನುಚಿತ ವರ್ತನೆಗಳು ಕಂಡುಬಂಣದಲ್ಲಿ ಕೂಡಲೇ ಪೊಲೀಸರು ಅಥವಾ ಮೆಟ್ರೋ ಸಿಬ್ಬಂದಿಗೆ ಪ್ರಯಾಣಿಕರು ತಿಳಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಇಂಥ ವರ್ತನೆ ಸಹಿಸಲು ಅಸಾಧ್ಯ. ತುರ್ತು ಪರಿಸ್ಥಿತಿ ಸಂದರ್ಭ ಬಳಕೆಮಾಡಿಕೊಳ್ಳುವ ಅವಕಾಶವನ್ನು ಇಂಥ ವೇಳೆ ಉಪಯೋಗಿಸಿಕೊಳ್ಳಬೇಕು ಎಂದು ಮೆಟ್ರೋ ಪ್ರಕಟಣೆ ತಿಳಿಸಿದೆ.