Asianet Suvarna News Asianet Suvarna News

ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮತ್ತೊಂದು ಗಂಭೀರ ಆರೋಪ..!

ಸ್ಯಾಂಡಲ್ ವುಡ್ ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಏನದು? ಇಲ್ಲಿದೆ ವಿವರ. 

MeToo I am getting life threatening phone calls from Arjun Sarja Fans Says Sruthi hariharan
Author
Bengaluru, First Published Oct 21, 2018, 5:30 PM IST

ಬೆಂಗಳೂರು, [ಅ.21]: ದೇಶಾದ್ಯಂತ ಸಂಚಲನ ಮೂಡಿಸಿದ ಮೀಟೂ ಅಭಿಯಾನದಲ್ಲಿ ಪ್ರಮುಖ ವ್ಯಕ್ತಿ ಹಾಗೂ ನಟರ ಮುಖವಾಡ ಕಳಚುತ್ತಿದೆ. ಅದರಲ್ಲೂ ನಟಿ ಶೃತಿ ಹರಿಹರನ್ ಸಿಡಿಸಿದ ಮೀಟೂ ಬಾಂಬ್ ಇಡೀ ಕನ್ನಡ ಚಿತ್ರರಂಗ ಬೆಚ್ಚಿಬಿದ್ದಿದೆ.

ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ನಟ ಅರ್ಜುನ್  ಸರ್ಜಾನಿಂದ ಮೀಟೂ ಅನುಭವ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದು, ಇದೀಗ ಶೃತಿ ಹರಿಹರನ್ ಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಈ ಕುರಿತು ಶೃತಿ ಹರಿಹರನ್ ಹೇಳಿದ್ದು ಹೀಗೆ.

#MeToo : ಸ್ಯಾಂಡಲ್ ವುಡ್ ಸ್ಟಾರ್ ನಟನ ಕರಾಳ ಮುಖ ಬಿಚ್ಚಿಟ್ಟ ಶ್ರುತಿ ಹರಿಹರನ್

ಇಂದು [ಭಾನುವಾರ] ಸುದ್ದಿಗಾರೊಂದಿಗೆ ಮಾತನಾಡಿದ ಶೃತಿ ಹರಿಹರನ್, ವಿಸ್ಮಯ ಚಿತ್ರದಲ್ಲಿ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಅರ್ಜುನಾ ಸರ್ಜಾ ಬೆಂಬಲಿಗರಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸರ್ಜಾ ಅಭಿಮಾನಿಗಳು ಎಂದು ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.

ನನಗೆ ಯಾವುದೇ ರೀತಿಯ ಪಬ್ಲಿಸಿಟಿ ಅವಶ್ಯಕತೆ ಇಲ್ಲ. ಶೂಟಿಂಗ್ ಪ್ಯಾಕ್ ಆಪ್ ಆದ್ಮೇಲೆ ಡಿನ್ನರ್ ಗೆ ಆಹ್ವಾನ ನೀಡಿದ್ದರು. ನನ್ನ ಆರೋಪದ ಬಗ್ಗೆ ಅರ್ಜುನ್ ಸರ್ಜಾ ಜತೆ ಮಾತಿಗೆ ಸಿದ್ಧ ಎಂದು ಶೃತಿ ಹರಿಹರನ್ ಸ್ಪಷ್ಟನೆ ನೀಡಿದ್ದಾರೆ.

Follow Us:
Download App:
  • android
  • ios