ಮಾಜಿ ಸಚಿವ ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂತ್ರಸ್ತೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಹಿಂದೆ ಯಾವುದೇ ಕಾಣದ ಕೈಗಳ ಕೆಲಸ ಇಲ್ಲ, ಸಿಎಂ ಸಾಹೇಬ್ರೆ ನನಗೆ ನ್ಯಾಯ ಕೊಡಿಸಲಿ, ಎಂದು ಸಂತ್ರಸ್ತೆ ಹೇಳಿದ್ದಾರೆ.

ವಿಜಯಪುರ: ಮಾಜಿ ಸಚಿವ ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂತ್ರಸ್ತೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಹಿಂದೆ ಯಾವುದೇ ಕಾಣದ ಕೈಗಳ ಕೆಲಸ ಇಲ್ಲ, ಸಿಎಂ ಸಾಹೇಬ್ರೆ ನನಗೆ ನ್ಯಾಯ ಕೊಡಿಸಲಿ, ಎಂದು ಸಂತ್ರಸ್ತೆ ಹೇಳಿದ್ದಾರೆ.

 ಒಂದು ಹೆಣ್ಮಗಳಿಗೆ ಅನ್ಯಾಯವಾಗಿದೆ, ಸಿಎಂ ಅದಕ್ಕೆ ನ್ಯಾಯಕೊಡಿಸಲಿ. ನಾನು ಯಾವುದೇ ಒತ್ತಡಕ್ಕೆ ಮಣಿದಿಲ್ಲ, ಎಂದು ಅವರು ಹೇಳಿದ್ದಾರೆ.

ನನ್ನನ್ನು ಸ್ವತಃ ಮೇಟಿ ಬೆಂಬಲಿಗರೇ ಅಪಹರಣ ಮಾಡಿದ್ದರು, ಅದಕ್ಕೆ ದೂರು ನೀಡಲು ತಡವಾಯ್ತು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

ಇಂದು ವಿಜಯಪುರದಲ್ಲಿ ಮಾತನಾಡುತ್ತಾ, ಪ್ರಕರಣದಲ್ಲಿ ಈಗಾಗಲೇ ಮೇಟಿಗೆ ಕ್ಲೀನ್ ಚೀಟ್ ಸಿಕ್ಕಾಗಿದೆ. ಈಗ ಮತ್ತೆ ಮಹಿಳೆ ಆರೋಪ ಮಾಡುತ್ತಿರುವುದನ್ನು ಗಮನಿಸಿದರೆ ಕಾಣದ ಕೈಗಳು ಕೆಲಸ ಮಾಡುತ್ತಿವೆ‌‌‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.