ಭಾರತದ ಗಡಿಯಲ್ಲಿ ಎದುರಾಳಿಗಳ ಚಲನ ವಲನ ಕಂಡು ಹಿಡಿಯುವುದು ಸಾಮಾನ್ಯವಲ್ಲ. ಹೀಗಾಗಿ ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನೋಲಾಜಿ ಕಂಪನಿಯವರು ಹಗಲು ಮತ್ತು ರಾತ್ರಿ ವೇಳೆ ಶತ್ರುಗಳ ಚಲನ ವಲನ  ಕಂಡುಹಿಡಿಯುವ ನ್ಯೂ ಟೆಕ್ನಾಲಜಿಯ ಕ್ಯಾಮೆರಾವನ್ನು ತಯಾರಿಸಿದ್ದಾರೆ.

ಬೆಂಗಳೂರು (ಫೆ.16): ಯಲಹಂಕದ ವಾಯು ನೆಲೆಯಲ್ಲಿ 11ನೇ ಏರ್ ಇಂಡಿಯಾ ಶೋ ಲೋಹದ ಹಕ್ಕಿಗಳ ಚಮತ್ಕಾರ ಆಗಸದಲ್ಲಿ ಹಕ್ಕಿಗಳನ್ನೂ ನಾಚಿಸುವಂತ್ತಿದೆ.

ದೇಶ ವಿದೇಶಗಳಿಂದ ಬಂದಿರುವ ವಿವಿಧ ಕಂಪನಿಗಳ ಯುದ್ಧೋಪಕರಣಗಳು ಏರ್ ಶೋ ಬರುವ ಜನರ ಗಮನ ಸೆಳೆಯುತ್ತಿದೆ. ಅದರಲ್ಲೂ ರಷ್ಯಾದ ಟುನಗುಸ್ಕಾ ಎಮ್-1 ಯುದ್ಧ ಟ್ಯಾಂಕರ್ ಸಾಕಷ್ಟು ವಿಶಿಷ್ಟತೆಗಳಿಂದ ಕೂಡಿದೆ.

ಈ ಟ್ಯಾಂಕರ್ ನೂತನ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಸ್ವಯಂ ಚಾಲಿತ ಟ್ಯಾಂಕರ್ ಇದಾಗಿದ್ದು, ಸುಮಾರು 32 ಟನ್ ತೂಕ ಹೊಂದಿದೆ. ಈ ಯುದ್ಧ ಟ್ಯಾಂಕರ್, ಪ್ರತಿ ಗಂಟೆಗೆ 65 ಕಿ.ಮೀ ವೇಗದಲ್ಲಿ ಓಡುತ್ತೆ.

ಈ ಟ್ಯಾಂಕರ್'ನ 25 ಕಿ.ಮೀ ಸುತ್ತಮುತ್ತ ಯಾವುದೇ ವಿಮಾನ ಅಥವಾ ಶತ್ರುಗಳ ಟ್ಯಾಂಕರ್ ಗಳು ಬಂದರೂ ಆಟೋಮ್ಯಾಟಿಕ್​ ಆಗಿ ಸ್ಕ್ಯಾನ್ ಮಾಡಬಲ್ಲ ಅತ್ಯಾಧುನಿಕ ಮಿಶನ್ ಗಳನ್ನು ಅಳವಡಿಸಲಾಗಿದೆ.

ಬೃಹತ್ ಆಕಾರದ ಗನ್, ವಿಶ್ಯಾಲ್'ಗಳನ್ನು ಈ ಟ್ಯಾಂಕರ್'ಗೆ ಅಳವಡಿಸಲಾಗಿದ್ದು ಈ ಬಾರಿಯ ಯುದ್ಧೋಪಕರಣ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಆಧುನಿಕ ವೈರ್'ಲೆಸ್ ಕ್ಯಾಮರಾಗಳು:

ಭಾರತದ ಗಡಿಯಲ್ಲಿ ಎದುರಾಳಿಗಳ ಚಲನ ವಲನ ಕಂಡು ಹಿಡಿಯುವುದು ಸಾಮಾನ್ಯವಲ್ಲ. ಹೀಗಾಗಿ ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನೋಲಾಜಿ ಕಂಪನಿಯವರು ಹಗಲು ಮತ್ತು ರಾತ್ರಿ ವೇಳೆ ಶತ್ರುಗಳ ಚಲನ ವಲನ ಕಂಡುಹಿಡಿಯುವ ನ್ಯೂ ಟೆಕ್ನಾಲಜಿಯ ಕ್ಯಾಮೆರಾವನ್ನು ತಯಾರಿಸಿದ್ದಾರೆ.

ಇದರಿಂದ ರಾತ್ರಿಹೊತ್ತು ಶತ್ರುಗಳನ್ನು ಈ ಕ್ಯಾಮರಾಗಳು ಸ್ಪಷ್ಟವಾಗಿ ಗುರುತಿಸುತ್ತೇವೆ. ಇದರ ಇನ್ನೊಂದು ವಿಶೇಷತೆ ಎಂದರೆ ಇವು ವೈರ್'ಲೆಸ್ ಕ್ಯಾಮರಾಗಳು, ಇವುಗಳನ್ನು ಎಲ್ಲಿ ಬೇಕಾದರೂ ಫಿಟ್ ಮಾಡಬಹುದು.