ನ.1ರಂದು ಕರಾಳ ದಿನಾಚರಣೆ ಹಾಗೂ ಸೈಕಲ್ ರ್ಯಾಲಿ ಮತ್ತು ನ.13ರಂದು ನಡೆಯಲಿರುವ ಮಹಾಮೇಳಾವಕ್ಕೆ ಅನುಮತಿ ನೀಡುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪದಾಧಿಕಾರಿಗಳು ಪೊಲೀಸ್ ಆಯುಕ್ತಕೃಷ್ಣ ಭಟ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಳಗಾವಿ: ನ.1ರಂದು ಕರಾಳ ದಿನಾಚರಣೆ ಹಾಗೂ ಸೈಕಲ್ ರ್ಯಾಲಿ ಮತ್ತು ನ.13ರಂದು ನಡೆಯಲಿರುವ ಮಹಾಮೇಳಾವಕ್ಕೆ ಅನುಮತಿ ನೀಡುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪದಾಧಿಕಾರಿಗಳು ಪೊಲೀಸ್ ಆಯುಕ್ತಕೃಷ್ಣ ಭಟ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಎಂಇಎಸ್ ಅಧ್ಯಕ್ಷ ದೀಪಕ ದಳವಿ ನೇತೃತ್ವದಲ್ಲಿ ಎಂಇಎಸ್ ಪದಾಧಿಕಾರಿಗಳು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ, ಈ ಸಂಬಂಧ ಚರ್ಚೆ ನಡೆಸಿದರು.

ಸೈಕಲ್ ರ್ಯಾಲಿ ಹೊರಡುವ ಮಾರ್ಗವನ್ನು ನಿಗದಿಪಡಿಸಿ ಅನುಮತಿ ನೀಡಬೇಕು. ನ.13ರಂದು ನಡೆಸಲು ಉದ್ದೇಶಿಸಿರುವ ಮಹಾಮೇಳಾವಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಲೋಜಿ ಅಷ್ಟೇಕರ, ಪ್ರಕಾಶ ಮರಗಾಳೆ, ವಿಕಾಸ ಕಲಘಟಗಿ, ಮಹೇಶ ಜುವೇಕರ, ರಾಜು ಮರ್ವೆ, ರಾಜು ಪಾವಲೆ ಮೊದಲಾದವರು ಇದ್ದರು.

ಬಳಿಕ ಎಂಇಎಸ್ ಪದಾಧಿಕಾರಿಗಳು ಪಾಲಿಕೆ ಆಯುಕ್ತ ಶಶಿಧರ ಕುರೇರ್ ಅವರನ್ನು ಭೇಟಿಯಾಗಿ, ಟಿಳಕವಾಡಿಯ ವ್ಯಾಕ್ಸಿನ ಡಿಪೋ ಮೈದಾನದಲ್ಲಿ ಮಹಾಮೇಳಾವ ಸಂಘಟಿಸಲು ಅನುಮತಿ ನೀಡುವಂತೆ ಕೋರಿದ್ದಾರೆ.

(ಸಾಂದರ್ಭಿಕ ಚಿತ್ರ)