ಕರವೇ ವಿರುದ್ಧ ಪೋಸ್ಟ್ ಮಾಡಿದ್ದ ವ್ಯಕ್ತಿಯ ಮೇಲೆ ಹಲ್ಲೆ

First Published 17, Jan 2018, 3:57 PM IST
Men Beat Up Karave Members
Highlights

ಗಾಂಧಿ ನಗರದ ಕಚೇರಿಯಲ್ಲಿ ಕರವೇ ನಾರಾಯಣ ಗೌಡರ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿದ್ದಾರೆ.

ಕರವೇ ವಿರುದ್ಧ ಫೇಸ್'ಬುಕ್'ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಮೇಲೆ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಕಾರು ಚಾಲಕ ಕಿಶೋರ್ ಹಲ್ಲೆಗೊಳಗಾದವ. ನಿನ್ನೆ ರಾತ್ರಿ ಕಿಶೋರ್'ನನ್ನು ಅಪಹರಿಸಿ ಕರವೇಯ ಗಾಂಧಿ ನಗರದ ಕಚೇರಿಯಲ್ಲಿ ಕರವೇ ನಾರಾಯಣ ಗೌಡರ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿದ್ದಾರೆ. ನಂತರ ಕಿಶೋರ್'ನಿಂದ ಮೊಬೈಲ್ ಕಿತ್ತುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

loader