ಸಂಸ್ಕೃತ ಮಂತ್ರ ಉರು ಹೊಡೆದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ

Memory Power Increase by Sanskrit Mantras
Highlights

ಸಂಸ್ಕೃತ ಮಂತ್ರಗಳನ್ನು ಉರುಹೊಡೆದರೆ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಎಂದು ಇಟಲಿಯ ನರರೋಗ ವಿಜ್ಞಾನಿಯೊಬ್ಬರು ಮಹತ್ವದ ಸಂಶೋಧನೆ ಮಾಡಿದ್ದಾರೆ.

ನವದೆಹಲಿ (ಜ.18): ಸಂಸ್ಕೃತ ಮಂತ್ರಗಳನ್ನು ಉರುಹೊಡೆದರೆ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಎಂದು ಇಟಲಿಯ ನರರೋಗ ವಿಜ್ಞಾನಿಯೊಬ್ಬರು ಮಹತ್ವದ ಸಂಶೋಧನೆ ಮಾಡಿದ್ದಾರೆ.

ವೇದ ಮಂತ್ರಗಳನ್ನು ಪಠಿಸುವುದರಿಂದ ಸ್ಮರಣೆಗೆ ಸಂಬಂಧಿಸಿದ ಮೆದುಳಿನ ಭಾಗಗಳಲ್ಲಿ ಶಕ್ತಿ ಹೆಚ್ಚಾಗುತ್ತದೆ ಎಂದು ಇಟಲಿಯ ಟ್ರೆಂಟೋ ವಿಶ್ವವಿದ್ಯಾಲಯದ ನರರೋಗ ವಿಜ್ಞಾನಿ ಜೇಮ್ಸ್ ಹರ್ಟ್‌ಜೆಲ್ ಅವರು ತಿಳಿಸಿದ್ದಾರೆ.

ಯಾವುದೇ ಒಂದು ಭಾಷೆ ಬಳಸಿದರೆ ಅದರಿಂದ ಪ್ರಭಾವವಾಗುತ್ತದೆ ಎಂಬ ಚರ್ಚೆ ಸಾಂಪ್ರದಾಯಿಕವಾಗಿ ಈವರೆಗೂ ಇತ್ತು. ಅದರಲ್ಲೇ ಮುಂದುವರಿದಿರುವ ಜೇಮ್ಸ್  ಅವರು ಸಂಸ್ಕೃತವನ್ನು ಕೇಂದ್ರವಾಗಿಟ್ಟುಕೊಂಡು ಸಂಶೋಧನೆ ನಡೆಸಿದ್ದಾರೆ. ಹರ್ಯಾಣದ ಮಾನೇಸರ್‌'ನಲ್ಲಿರುವ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ| ತನ್ಮಯ್ ಹಾಗೂ ಡಾ| ನಂದಿನಿ ಜತೆ ಅವರು ಪರಾಮರ್ಶೆ ನಡೆಸಿದ್ದಾರೆ. 42

ಸ್ವಯಂ ಸೇವಕರನ್ನು ಬಳಸಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಆ ಪೈಕಿ 21 ಮಂದಿ ವೃತ್ತಿಪರ ಸಂಸ್ಕೃತ ಪಂಡಿತರಾಗಿದ್ದು, ಶುಕ್ಲ ಯಜುರ್ವೇದ ಪಠಿಸುವವರಾಗಿದ್ದರು.

 

loader