ಟ್ವಿಟರ್‌ನಲ್ಲಿ ದಿ.ಸುಷ್ಮಾ ಸ್ವರಾಜ್, ನಿಮಗೊಂದು ಮಾಹಿತಿ

ಸಮಯ ನೋಡದೇ ಜನ ಸಾಮಾಣ್ಯರ ಸಹಾಯಕ್ಕೆ ಧಾವಿಸುತ್ತಿದ್ದ ಸುಷ್ಮಾ ಸ್ವರಾಜ್| ಟ್ವಿಟರ್ ಮೂಲಕವೇ ವಿದೇಶಾಂಗ ಖಾತೆಯನ್ನು ನಿರ್ವಹಿಸುತ್ತಿದ್ದ ವಿದೇಶಾಂಗ ಸಚಿವೆ| ಟ್ವಿಟರ್‌ನಲ್ಲಿ ಅತ್ಯಂತ ಆ್ಯಕ್ಟಿವ್ ಆಗಿದ್ದ ಸುಷ್ಮಾಗೆ 13.2 ಮಿಲಿಯನ್ ಫಾಲೋವರ್ಸ್| ಹೆಚ್ಚು ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿದ್ದ ಸುಷ್ಮಾ ಫಾಲೋ ಮಾಡಿದ್ದೆಷ್ಟು ಮಂದಿಯನ್ನು?

Sushma Swaraj did not follow BJP PM Modi on Twitter in fact she followed nobody

ನವದೆಹಲಿ[ಆ.08]: ಟ್ವಿಟರ್ ಮಿನಿಸ್ಟರ್ ಎಂದೇ ಖ್ಯಾತರಾಗಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೊನೆಯುಸಿರೆಳೆದಿದ್ದಾರೆ. ಇವರ ಅಗಲುವಿಕೆ ಭಾರತ ಹಾಗೂ ಬಿಜೆಪಿಗೆ ಭರಿಸಲಾರದ ನಷ್ಟವುಂಟು ಮಾಡಿದೆ. ಸಹಾಯ ಕೋರಿದವರಿಗೆ ಸಮಯ ನೋಡದೆ ಕೈ ಚಾಚುತ್ತಿದ್ದ ಸುಷ್ಮಾ ಟ್ವಿಟರ್ ನಲ್ಲೀ ಅತ್ಯಂತ ಆ್ಯಕ್ಟಿವ್ ಆಗಿದ್ದರು, ಟ್ವೀಟ್ ಮೂಲಕ ಜನರ ರಕ್ಷಣೆಗೆ ಧಾವಿಸುತ್ತಿದ್ದು. ಹೀಗಾಗೇ ಅವರು ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ಆದರೆ ಬಹುದೊಡ್ಡ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿದ್ದ ಸುಷ್ಮಾ ಎಷ್ಟು ಮಂದಿಯನ್ನು ಫಾಲೋ ಮಾಡ್ತಿದ್ರು? ಫಾಲೋವಿಂಗ್ ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ.

ಪಾಕ್ ನಂಟು, ತುರ್ತುಪರಿಸ್ಥಿತಿ ವೇಳೆ ವಿವಾಹ: ಸುಷ್ಮಾ ಬಗ್ಗೆ ಗೊತ್ತಿರದ ಸಂಗತಿಗಳು

ಹೌದು ಸುಷ್ಮಾ ವಿದೇಶಾಂಗ ಸಚಿವೆಯಾಗಿದ್ದ ಅವಧಿಯಲ್ಲಿ ಭಾರತೀಯರು ವಿಶ್ವದ ಯಾವ ಮೂಲೆಯಲ್ಲಿ ಅಪಾಯಕ್ಕೊಳಪಟ್ಟರೂ ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳುತ್ತಾರೆ. ಅವರ ರಕ್ಷಣೆಗೆ ಭಾರತೀಯ ವಿದೇಶಾಂಗ ಸಚಿವಾಲಯ ಇದೆ ಎಂಬುವುದನ್ನು ಸುಷ್ಮಾ ತಮ್ಮ ಕಾರ್ಯವೈಖರಿಯಿಂದ ಸಾಬೀತುಪಡಿಸಿದ್ದರು. ನಾವು ಸಂಕಷ್ಟದಲ್ಲಿದ್ದೇವೆ ಎಂದು ಒಂದು ಟ್ವೀಟ್ ಮಾಡಿದರೆ ಸಾಕು ಸೂಕ್ತ ಕ್ರಮ ಕೈಗೊಂಡು ಅವರನ್ನು ರಕ್ಷಿಸಲಾಗುತ್ತಿತ್ತು. ಹೀಗಾಗೇ ಮಮತಾಮಯಿ ಸುಷ್ಮಾ ಟ್ವಿಟರ್ ನಲ್ಲಿ ಬರೋಬ್ಬರಿ 13.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು.

ಜನಸಾಮಾನ್ಯರಿಗೆ ಸುಷ್ಮಾ ಯಾಕೆ ಇಷ್ಟ? ಈ ಸಾಧನೆಗಳೆ ಹೇಳುತ್ತವೆ ಉತ್ತರ

ಆದರೆ 13.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಸುಷ್ಮಾ ಮಾತ್ರ ಯಾರನ್ನೂ ಫಾಲೋ ಮಾಡುತ್ತಿರಲಿಲ್ಲ ಎಂಬುವುದು ಬಹಳ ಅಚ್ಚರಿ ಮೂಡಿಸುವಂತಹುದ್ದು. ಹೌದು ಅವರ ಟ್ವಿಟರ್ ಖಾತೆ ತೆರೆದರೆ ಅಲ್ಲಿ ಅವರು ಫಾಲೋ ಮಾಡುತ್ತಿದ್ದವರ ಸಂಖ್ಯೆ 0 ಎಂಬುವುದನ್ನು ಕಾಣಬಹುದು.

Sushma Swaraj did not follow BJP PM Modi on Twitter in fact she followed nobody

ರಾಷ್ಟ್ರಪತಿ, ಬಿಜೆಪಿ ಟ್ವಿಟರ್ ಖಾತೆ, ಪ್ರಧಾನಿ ಮೋದಿ ಯಾರನ್ನೂ ಅವರು ಫಾಲೋ ಮಾಡುತ್ತಿರಲಿಲ್ಲ ಎಂಬುವುದು ಅಚ್ಚರಿ ಮೂಡಿಸುವಂತಹದ್ದು. ಮಾತೃ ಹೃದಯಿ ತಮ್ಮ ಕಾರ್ಯ ವೈಖರಿಯಿಂದಲೇ ಜನ ಸಾಮಾನ್ಯರ ಹೃದಯ ಗೆದ್ದಿದ್ದರು ಎಂಬುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಬೇಕಿಲ್ಲ ಅಲ್ಲವೇ.

Latest Videos
Follow Us:
Download App:
  • android
  • ios