700 ಕಿ.ಮೀ ದೂರದಿಂದ ಹುತಾತ್ಮ ಯೋಧನನ್ನು ನೋಡ ಬಂದ ದೇಶಪ್ರೇಮಿ
ಹಾಸನ (ಜ.29): ಬಾಯಿ ಮಾತಿನಲ್ಲಿ ಯೋಧರ ಬಗ್ಗೆ ಎಲ್ಲರೂ ಗೌರವ ತೋರುತ್ತಾರೆ. ಆದರೆ ದೂರದ ಯಾದಗಿರಿಯ ಯುವಕನೊಬ್ಬ ಹುತಾತ್ಮ ಯೋಧ ಸಂದೀಪ್ ಪಾರ್ಥೀವ ಶರೀರದ ದರ್ಶನಕ್ಕೆಂದು ಹಾಸನದ ದೇವಿಹಳ್ಳಿಗೆ ಆಗಮಿಸಿದ್ದಾನೆ.
700 ಕಿಲೋ ಮೀಟರ್ ದೂರದಿಂದ ದೇವಿಹಳ್ಳಿಗೆ ಬಂದು ದೇಶಪ್ರೇಮ ಮೆರೆದಿರುವ ಯುವಕ ಈಶ್ವರ್ ಹುತಾತ್ಮ ಯೋಧ ಸಂದೀಪ್ ಪಾರ್ಥಿವ ಶರೀರ ದರ್ಶನಮಾಡಿ, ಗೌರವ ಸಲ್ಲಿಸುವುದಕ್ಕಾಗಿ ಕಾದು ಕುಳಿತಿದ್ದಾನೆ.
