ಭಾರತದಲ್ಲಿ ವಾಸವಾಗಿರುವ ಪಾಕಿಸ್ತಾನ ಮೂಲದ ಮಹಿಳೆಯೊಬ್ಬಳು ಕಳೆದ 22-23 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಾ ಬಂದಿದ್ದಾರೆ ಎಂದು ಏಎನ್ಐ  ವರದಿ ಮಾಡಿದೆ. ಸುಮಾರು 22-23 ವರ್ಷದಿಂದ ನಾನು ಮೋದಿಯವರಿಗೆ ರಾಖಿ ಕಟ್ಟುತ್ತಾ ಬಂದಿದ್ದೇನೆ. ಈ ಬಾರಿಯೂ ಕಟ್ಟುತ್ತಿರುವುದು ಸಂತೋಷ ತಂದಿದೆ, ಎಂದು  ಖಮರ್ ಮೊಹ್ಸಿನ್ ಶೇಖ್ ಹೇಳಿದ್ದಾರೆ.

ನವದೆಹಲಿ: ಭಾರತದಲ್ಲಿ ವಾಸವಾಗಿರುವ ಪಾಕಿಸ್ತಾನ ಮೂಲದ ಮಹಿಳೆಯೊಬ್ಬಳು ಕಳೆದ 22-23 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಾ ಬಂದಿದ್ದಾರೆ ಎಂದು ಏಎನ್ಐ ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು 22-23 ವರ್ಷದಿಂದ ನಾನು ಮೋದಿಯವರಿಗೆ ರಾಖಿ ಕಟ್ಟುತ್ತಾ ಬಂದಿದ್ದೇನೆ. ಈ ಬಾರಿಯೂ ಕಟ್ಟುತ್ತಿರುವುದು ಸಂತೋಷ ತಂದಿದೆ, ಎಂದು ಖಮರ್ ಮೊಹ್ಸಿನ್ ಶೇಖ್ ಹೇಳಿದ್ದಾರೆ.

ಮದುವೆಯ ಬಳಿಕ ಭಾರತದಲ್ಲೇ ನೆಲೆಸಿರುವ ಖಮರ್, ಮೋದಿಯವರನ್ನು ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಕಾಲದಿಂದಲೇ ಬಲ್ಲೆ ಎಂದು ಹೇಳಿದ್ದಾರೆ.

ಆಗ ಅವರು ಸಂಘದ ಕಾರ್ಯಕರ್ತರಾಗಿದ್ದರು, ಈಗ ಕಠಿಣ ಪರಿಶ್ರಮದಿಂದ ಈಗ ಪ್ರಧಾನಿಯಾಗಿದ್ದಾರೆ, ಎಂದು ಖಮರ್ ಹೇಳಿದ್ದಾರೆ.

ಪ್ರಧಾನಿಯವರು ಕೆಲಸದ ಒತ್ತಡವಿರುವುದರಿಂದ ಈ ಬಾರಿ ಅವರು ಕರೆ ಮಾಡಲ್ಲವೆಂದು ತಿಳಿದುಕೊಂಡಿದ್ದೆ, ಆದರೆ 2 ದಿನಗಳ ಹಿಂದೆ ಅವರೇ ಖುದ್ದು ಕರೆ ಮಾಡಿದ್ದರು ಎಂದು ಆಕೆ ತಿಳಿಸಿದ್ದಾರೆ.

(ಚಿತ್ರ: ಏಎನ್ಐ)