Asianet Suvarna News Asianet Suvarna News

ಜಿಎಸ್ಟಿ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ: ಕೇಂದ್ರದ ವಿರುದ್ಧ ಮೆಡಿಕಲ್, ಹೋಟೆಲ್ ಸಂಘಗಳ ಸಮರ

ಸಿಲಿಕಾನ್​ ಸಿಟಿಯಲ್ಲಿ ಇವತ್ತು ಹೋಟೆಲ್​'ಗಳಲ್ಲಿ ಊಟ ಸಿಗುವುದಿಲ್ಲ. ಇತ್ತ ಮೆಡಿಕಲ್'​ಗಳಲ್ಲಿ ಔಷಧಿಯೂ ದೊರೆಯುವುದಿಲ್ಲ. ಈ ಮೂಲಕ ಎರಡು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ.

Medical Shops And Hotels Are Closed Today
  • Facebook
  • Twitter
  • Whatsapp

ಬೆಂಗಳೂರು(ಮೇ.30): ಸಿಲಿಕಾನ್​ ಸಿಟಿಯಲ್ಲಿ ಇವತ್ತು ಹೋಟೆಲ್​'ಗಳಲ್ಲಿ ಊಟ ಸಿಗುವುದಿಲ್ಲ. ಇತ್ತ ಮೆಡಿಕಲ್'​ಗಳಲ್ಲಿ ಔಷಧಿಯೂ ದೊರೆಯುವುದಿಲ್ಲ. ಈ ಮೂಲಕ ಎರಡು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ.

ಬೆಂಗಳೂರಿಗರೇ ಇವತ್ತು ಹೋಟೆಲ್ ಊಟ-ತಿಂಡಿ ನಂಬಲೇಬೇಡಿ

ಬೆಂಗಳೂರಿಗರೇ ಆಫೀಸ್​'ಗೆ ಹೋದರು ಹೋಟೆಲ್'​ಗೆ ಊಟಕ್ಕೆ ಹೋಗುತ್ತೀರಾ? ತಿಂಡಿನೂ ಅಲ್ಲೇ  ಮಾಡುತ್ತೀರಾ? ಹಾಗಿದ್ದರೆ ಇವತ್ತು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ಯಾಕೆಂದರೆ ಇವತ್ತು ಬೆಂಗಳೂರಲ್ಲಿ ಹೋಟೆಲ್ ತೆರೆಯುವುದಿಲ್ಲ. ಫುಟ್​ ಪಾತ್ ಹೋಟೆಲ್'ನಿಂದ ಹಿಡಿದು ಬೃಹತ್ ಹೋಟೆಲ್​'ಗಳವರೆಗೂ ಬಂದ್. ಜಿಎಸ್'​ಟಿಯನ್ನು ವಿರೋಧಿಸಿ ಹೋಟೆಲ್'​ಗಳ ಸಂಘ ದಕ್ಷಿಣ ಭಾರತದಾದ್ಯಂತ ಬಂದ್'​ಗೆ ಕರೆ ನೀಡಿದೆ. ಇದಕ್ಕೆ ಬೃಹತ್​ ಬೆಂಗಳೂರು ಹೋಟೆಲ್​'ಗಳ ಸಂಘ ಕೂಡ ಬೆಂಬಲ ನೀಡಿದೆ. ಹೀಗಾಗಿ ಹೋಟೆಲ್​,ಲಾಡ್ಜ್​ಬೇಕರಿಗಳು ಕೂಡ ಇವತ್ತು ತೆರೆಯುವುದು ಡೌಟ್​.

ಇಂದು ರಾಷ್ಟ್ರವ್ಯಾಪಿ ಮೆಡಿಕಲ್​ ಶಾಪ್​ಗಳು ಬಂದ್: ರಾಜ್ಯಾದ್ಯಂತ 28 ಸಾವಿರಕ್ಕೂ ಅಧಿಕ ಮೆಡಿಕಲ್​ ಶಾಪ್'​ಗಳು ಕ್ಲೋಸ್

ಜಿಎಸ್​ಟಿ ವಿರುದ್ಧ ಹೋಟೆಲ್ ಸಂಘಟನೆಗಳು ಬಂದ್'​ಗೆ ಕರೆ ನೀಡಿದ್ದರೆ, ಇತ್ತ ಆನ್'​ಲೈನ್​ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಸಂಘ ಬಂದ್'​ಗೆ ಕರೆ ನೀಡಿದೆ. ಹೀಗಾಗಿ ರಾಜ್ಯಾದ್ಯಂತ 28 ಸಾವಿರಕ್ಕೂ ಅಧಿಕ ಮೆಡಿಕಲ್​ ಶಾಪ್​'ಗಳು ಬಂದ್ ಆಗುತ್ತಿವೆ.

ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಆರೋಗ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಎಲ್ಲೆಲ್ಲಿ ಸಿಗಲಿದೆ ಮೆಡಿಷನ್

ಇವತ್ತು ಎಂದಿನಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತದೆ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಮೆಡಿಕಲ್​ ಶಾಪ್'​ಗಳು ಕೂಡ ಬಂದ್​ ಆಗಲ್ಲ. ನರ್ಸಿಂಗ್ ಹೋಂಗಳಲ್ಲಿನ  ಔಷಧ ಅಂಗಡಿಗಳೂ ಎಂದಿನಂತೆ ತೆರೆದಿರುತ್ತವೆ. ಜೊತೆಗೆ ಅಗತ್ಯ ಔಷಧಗಳೊಂದಿಗೆ 108 ಆ್ಯಂಬುಲೆನ್ಸ್ ಕೂಡಾ ಸಿದ್ಧವಾಗಿರುತ್ತದೆ, 6 ಸಹಾಯಕ ಔಷಧ ನಿಯಂತ್ರಕರನ್ನು ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಜನರ ಸಹಾಯಕ್ಕಾಗಿ ದೂರವಾಣಿ ಸಂಖ್ಯೆ 104ನ್ನು ಸಂಪರ್ಕಿಸಬಹುದಾಗಿದೆ.    

ಇನ್ನು ಅಷ್ಟೇ ಅಲ್ಲದೆ ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಂತ ಬೆಂಗಳೂರಿನ 6 ವೃತ್ತಕ್ಕೆ 6 ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಒಟ್ಟಿನಲ್ಲಿ ಕೇಂದ್ರ ಹಾಗೂ ಸಂಘಟನೆಗಳ ಜಟಾಪಟಿಯಿಂದ ಇವತ್ತು ಔಷಧಿ ಹಾಗೂ ಆಹಾರ ವಿಚಾರದಲ್ಲಿ ಜನ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

Follow Us:
Download App:
  • android
  • ios