ಗರ್ಭಿಣಿಯರು ಹಾಗೂ ನವಜಾತ ಶಿಶುಗಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸುವು ದಕ್ಕಾಗಿ ಬಿಸಿಯೂಟ ಮಾದರಿಯಲ್ಲಿ ಅವರಿಗೆ ಅಂಗನವಾಡಿ ಕೇಂದ್ರದಲ್ಲಿಯೇ ಅಡುಗೆ ತಯಾರಿಸಿ, ಊಟ ಒದಗಿಸುವ ‘ಮಾತೃ ಪೂರ್ಣ’ ಯೋಜನೆ ಜಾರಿಗೆ ಮಹಿಳೆ, ಮಕ್ಕಳ ಕಲ್ಯಾಣ ಇಲಾಖೆ ತೀರ್ಮಾನಿಸಿದೆ. ಗಾಂಧಿ ಜಯಂತಿಯಂದು (ಅ.2) ಈ ಯೋಜನೆ ರಾಜ್ಯಾದ್ಯಂತ ಅನುಷ್ಠಾನಗೊಳ್ಳಲಿದೆ.

ಬೆಂಗಳೂರು(ಆ.24): ಗರ್ಭಿಣಿಯರು ಹಾಗೂ ನವಜಾತ ಶಿಶುಗಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸುವು ದಕ್ಕಾಗಿ ಬಿಸಿಯೂಟ ಮಾದರಿಯಲ್ಲಿ ಅವರಿಗೆ ಅಂಗನವಾಡಿ ಕೇಂದ್ರದಲ್ಲಿಯೇ ಅಡುಗೆ ತಯಾರಿಸಿ, ಊಟ ಒದಗಿಸುವ ‘ಮಾತೃ ಪೂರ್ಣ’ ಯೋಜನೆ ಜಾರಿಗೆ ಮಹಿಳೆ, ಮಕ್ಕಳ ಕಲ್ಯಾಣ ಇಲಾಖೆ ತೀರ್ಮಾನಿಸಿದೆ. ಗಾಂಧಿ ಜಯಂತಿಯಂದು (ಅ.2) ಈ ಯೋಜನೆ ರಾಜ್ಯಾದ್ಯಂತ ಅನುಷ್ಠಾನಗೊಳ್ಳಲಿದೆ.

3 ತಿಂಗಳ ಗರ್ಭಿಣಿಯರಿಂದ ಹಿಡಿದು 6 ತಿಂಗಳ ಬಾಣಂತಿವರೆಗೂ ಅಂಗನವಾಡಿ ಕೇಂದ್ರದಲ್ಲಿ ತಯಾರಿಸಿದ ಊಟ ಒದಗಿಸಲಾಗುತ್ತದೆ. ಇದಕ್ಕಾಗಿ ಗರ್ಭಿಣಿಯರು ಹಾಗೂ ಬಾಣಂತಿಯರು ಅಂಗನವಾಡಿಗೆ ಹೋಗುವುದು ಕಡ್ಡಾಯ. ಮೊದಲ ಬಾರಿಗೆ ಗರ್ಭಿಣಿ ಯಾದವರು ಹಾಗೂ ಬಾಣಂತಿಯಾದವರಿಗೆ ಮಾತ್ರ ಈ ಯೋಜನೆ ತರಲು ತೀರ್ಮಾನಿಸಲಾಗಿತ್ತು. ಆದರೆ, ಇದೀಗ ಮಹಿಳೆಯೊಬ್ಬಳು ಎಷ್ಟು ಬಾರಿ ಗರ್ಭಿಣಿ ಯಾದರೂ ಅದನ್ನು ಪರಿಗಣಿಸದೇ ಆಕೆಗೆ ಪೌಷ್ಟಿಕ ಆಹಾರ ಒದಗಿಸಲು ನಿರ್ಧರಿಸಿದೆ.

ಗರ್ಭಿಣಿಯರು ಹಾಗೂ ಬಾಣಂತಿಯರು ಅಪೌಷ್ಟಿಕತೆಯಿಂದ ಬಳಲದಂತೆ ಹಾಗೂ ಅವರ ಸದೃಢ ಆರೋಗ್ಯಕ್ಕಾಗಿ ಈ ಮೊದಲು ಅಂಗನವಾಡಿಯಿಂದಲೇ ಬೇಳೆ ಕಾಳು, ರಾಗಿ ಸೇರಿದಂತೆ ಹಲವಾರು ಆಹಾರ ‘ಾನ್ಯಗಳನ್ನು ಪೂರೈಸಲಾಗುತ್ತಿತ್ತು. ಆದರೂ ಬಹುತೇಕ ಗರ್ಭಿಣಿಯರು ಹಾಗೂ ನವಜಾತ ಶಿಶುಗಳಲ್ಲಿ ಅಪೌಷ್ಟಿಕತೆ ಕಾಣುತ್ತಿದ್ದು, ಮಹಿಳೆಯರು ಹೆರಿಗೆ ಸಮಯದಲ್ಲಿ ಹಾಗೂ ಬಾಣಂತಿ ಅವಧಿಯಲ್ಲಿ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಪೌಷ್ಟಿಕತೆಯಿಂದಾಗಿ ನವಜಾತ ಶಿಶುಗಳಲ್ಲಿಯೂ ತೊಂದರೆಗಳು ಕಾಣುತ್ತಿವೆ. ಈ ಸಮಸ್ಯೆ ತಪ್ಪಿಸಿ, ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕೆಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಅಂಗನವಾಡಿಯಲ್ಲಿಯೇ ಪೌಷ್ಟಿಕಾಂಶಭರಿತ ಆಹಾರ ನೀಡಲು ತೀರ್ಮಾನಿಸಲಾಗಿದೆ.

ಅವರಿಗೆ ಅನ್ನ, ಸಾಂಬಾರು, ಪಲ್ಯ, ಮೊಟ್ಟೆ, ಹಾಲು ಹಾಗೂ ಒಂದು ಶೇಂಗಾ ಚಿಕ್ಕಿ ನೀಡಲು ಯೋಜನೆ ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳ ಪ್ರಕಾರ ಈ ಮೊದಲು ಪ್ರತಿಯೊಬ್ಬ ಗರ್ಭಿಣಿ ಹಾಗೂ ಬಾಣಂತಿಗೆ 21 ರೂಪಾಯಿ ಮೊತ್ತದಲ್ಲಿ ಊಟ ಒದಗಿಸಲಾಗುತ್ತಿದೆ. ಅಂಗನವಾಡಿಯಲ್ಲಿ ಅಡುಗೆ ತಯಾರಿಸಲು ಪ್ರತ್ಯೇಕ ಸಿಬ್ಬಂದಿ ನೇಮಿಸಿಕೊಳ್ಳದೇ, ಅಂಗನವಾಡಿ ಸಿಬ್ಬಂದಿಯಿಂದಲೇ ಅಡುಗೆ ಸಿದ್ಧಪಡಿಸಲಾಗುತ್ತಿದೆ.

ಏನಿದು ಯೋಜನೆ?

-ಅಪೌಷ್ಟಿಕತೆ ತಪ್ಪಿಸಲು ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ ಒದಗಿಸುವ ಯೋಜನೆ ಇದು.

- ಫಲಾನುಭವಿಗಳು ಸಮೀಪದ ಅಂಗನವಾಡಿಗೆ ಹೋಗಿ ಊಟ ಮಾಡಬಹುದು.

- ಅನ್ನ, ಸಾಂಬಾರು, ಪಲ್ಯ, ಮೊಟ್ಟೆ, ಹಾಲು ಹಾಗೂ ಒಂದು ಶೇಂಗಾ ಚಿಕ್ಕಿ ವಿತರಣೆ

- ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಂದ ಅಡುಗೆ ತಯಾರಿ: ಪ್ರತ್ಯೇಕ ಸಿಬ್ಬಂದಿ ಇಲ್ಲ

- ಯೋಜನೆಗೆ ‘ಮಾತೃಪೂರ್ಣ’ ಹೆಸರು: ಪ್ರತಿ ಫಲಾನುಭವಿಗೆ ತಲಾ 21 ರು. ವೆಚ್ಚ