ಕನ್ನಡ ಚಿತ್ರರಂಗದಲ್ಲೂ ಚುರುಕುಗೊಂಡ ಮೀ ಟೂ ಅಭಿಯಾನ ಈಗ ನಟ ಅರ್ಜುನ್ ಸರ್ಜಾ ಅವರ ಕೊರಳಿಗೆ ಸುತ್ತಿಕೊಂಡಿದೆ. ನಟಿ ಶ್ರುತಿ ಹರಿಹರನ್, ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದ್ದು ಶ್ರುತಿಗೆ ಬೆಂಬಲಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ನಿಂತಿದ್ದಾರೆ.

ಬೆಂಗಳೂರು :  ಕನ್ನಡ ಚಿತ್ರರಂಗದಲ್ಲೂ ಚುರುಕುಗೊಂಡ ಮೀ ಟೂ ಅಭಿಯಾನ ಈಗ ನಟ ಅರ್ಜುನ್ ಸರ್ಜಾ ಅವರ ಕೊರಳಿಗೆ ಸುತ್ತಿಕೊಂಡಿದೆ. ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ಮೇಲೆ ಖ್ಯಾತ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಮೀ ಟೂ ಆರೋಪ ಮಾಡಿದ ಶ್ರುತಿಗೆ ನಟ ಪ್ರಕಾಶ್ ರೈ ಬೆಂಬಲ ಸೂಚಿಸಿದ್ದಾರೆ. ಶ್ರುತಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ಹಾಗೂ ದಿಟ್ಟ ಹೆಣ್ಣು ಎಂದು ಬಣ್ಣಿಸಿದ್ದಾರೆ. 

"

ಅರ್ಜುನ್ ಸರ್ಜಾ ಕನ್ನಡದ ಹೆಮ್ಮೆ ಎಂಬುದನ್ನು ಮರೆಯದಿರೋಣ. ಆದರೆ ಶ್ರುತಿ ಅನುಭವಿಸಿದ ಅಸಹಾಯಕತೆ ಹಾಗೂ ಅವಮಾನವನ್ನೂ ಅರ್ಥ ಮಾಡಿಕೊಳ್ಳಬೇಕು. ಆ ಹೆಣ್ಣಿನ ಗಾಯದ ನೋವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ರೈ ಹೇಳಿದ್ದಾರೆ. 

ಅಲ್ಲದೇ ನಟ ಅರ್ಜುನ್ ಸರ್ಜಾ ಅವರು ಈ ಆರೋಪವನ್ನು ಅಲ್ಲಗಳೆದರೂ ಕೂಡ ಕ್ಷಮೆ ಕೇಳಬೇಕು. ನೋವಿಗಾಗಿ, ವರ್ತನೆಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ. ಗಂಡಸರು ಹೆಣ್ಣಿನ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆ ಕಳೆದುಕೊಂಡಿದ್ದು ನಿಜ. ನಾನು ಶ್ರುತಿ ಹರಿಹರನ್ ಹಾಗೂ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರ ನಿಲ್ಲುತ್ತೇನೆ. ಅರ್ಜುನ್ ಸರ್ಜಾ ಇದಕ್ಕೆ ಕ್ಷಮೆ ಕೇಳಬೇಕು ಎಂದು ಪ್ರಕಾಶ್ ರೈ ಹೇಳಿದ್ದಾರೆ.