ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್‌ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಎದುರಿಸುತ್ತಿದ್ದ ಮಾಜಿ ಪ್ಲೇ ಬಾಯ್  ರೂಪದರ್ಶಿ ಮೆಕ್‌ ಡೌಗಲ ಸಿಎನ್‌ಎನ್‌ಗೆ ನೀಡಿರುವ ಸಂದರ್ಶನದಲ್ಲಿ ಟ್ರಂಪ್‌ ಜೊತೆಗೆ ತಮಗೆ ಸಂಬಂಧವಿದ್ದಿದ್ದು ನಿಜ ಎಂದು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

ವಾಷಿಂಗ್ಟನ್‌ (ಮಾ.24): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಎದುರಿಸುತ್ತಿದ್ದ ಮಾಜಿ ಪ್ಲೇ ಬಾಯ್ ರೂಪದರ್ಶಿ ಮೆಕ್‌ ಡೌಗಲ ಸಿಎನ್‌ಎನ್‌ಗೆ ನೀಡಿರುವ ಸಂದರ್ಶನದಲ್ಲಿ ಟ್ರಂಪ್‌ ಜೊತೆಗೆ ತಮಗೆ ಸಂಬಂಧವಿದ್ದಿದ್ದು ನಿಜ ಎಂದು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

‘2006ರಲ್ಲಿ ಬೆವೆರ್ಲಿ ಹಿಲ್ಸ್‌ ಹೋಟೆಲ್‌ನಲ್ಲಿ ನಮ್ಮ ಮೊದಲ ಲೈಂಗಿಕ ಸಂಪರ್ಕ ನಡೆದಿತ್ತು. ಆ ಸಂದರ್ಭದಲ್ಲಿ ಟ್ರಂಪ್‌ ಹಣ ನೀಡಲು ಬಂದಾಗ ನಾನು ಅಂಥವಳಲ್ಲ ಎಂದು ನಿರಾಕರಿಸಿದ್ದೆ. ಅನಂತರ 10 ತಿಂಗಳು ನಮ್ಮಿಬ್ಬರ ಸಂಬಂಧ ಮುಂದುವರೆದಿತ್ತು. ಟ್ರಂಪ್‌ ಮತ್ತು ನಾನು ಹತ್ತಾರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಅನಂತರ ನನಗೆ ಪಶ್ಚಾತಾಪ ಕಾಡುತ್ತಿತ್ತು. ಹಾಗಾಗಿ 2007ರಲ್ಲಿ ಸಂಬಂಧ ಮುರಿದುಬಿತ್ತು’ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಅವರಲ್ಲಿ ಅವರು ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಆದರೆ ಮೆಕ್‌ ಡೌಗಲ ಅವರ ಈ ಆರೋಪವನ್ನು ಟ್ರಂಪ್‌ ಅಲ್ಲಗಳೆದಿದ್ದಾರೆ.