ನವದೆಹಲಿ[ಜು.12]: ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತೃಣಮೂಲ ಕಾಂಗ್ರೆಸ್‌ ಸಂಸದ ಪ್ರಸೂನ್‌ ಬ್ಯಾನರ್ಜಿ ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲಿಗ ಗೌತಮ್‌ ಸರ್ಕಾರ್‌ ಅವರೊಂದಿಗೆ ಸಂಸತ್ತಿನ ಆವರಣದಲ್ಲಿ ಫುಟ್ಬಾಲ್‌ ಆಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ.

ದೇಶದ ಫುಟ್ಬಾಲ್‌ ಫೆಡರೇಷನ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಕ್ರೀಡೆಗಾಗಿ ಏನನ್ನೂ ಮಾಡುತ್ತಿಲ್ಲ. ಹೀಗಾಗಿ ಫುಟ್ಬಾಲ್‌ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾಗಿ ಪ್ರಸೂನ್‌ ಬ್ಯಾನರ್ಜಿ ಹೇಳಿದ್ದಾರೆ.

ಫುಟ್ಬಾಲ್‌ ಅನ್ನು ಕೂಡ ದೇಶದಲ್ಲಿ ಇನ್ನೂ ಜನಪ್ರಿಯಗೊಳಿಸಬಹುದಾಗಿದೆ. ಆದರೆ, ಯಾರೂ ಕೂಡ ಪ್ರಯತ್ನ ಮಾಡುತ್ತಿಲ್ಲ. ಎನ್‌ಸಿಪಿ ಸಂಸದರಾಗಿರುವ ಪ್ರಪುಲ್‌ ಪಟೇಲ್‌ ಫುಟ್ಬಾಲ್‌ ಕುರಿತು ಏನನ್ನೂ ಮಾಡಿಲ್ಲ. ಎಲ್ಲಾ 543 ಸಂಸದರು ಒಟ್ಟಾಗಿ ಫುಟ್ಬಾಲ್‌ ಅನ್ನು ಉತ್ತೇಜಿಸಕು ಎಂದು ನಾನು ಮಾನವಿ ಮಾಡುತ್ತೇನೆ ಎಂದು ಪ್ರಸೂನ್‌ ಬ್ಯಾನರ್ಜಿ ಹೇಳಿದ್ದಾರೆ.