ಕಣ್ಣೀರು ಹಾಕಿದ ಎಂ.ಬಿ ಪಾಟೀಲ್

MB Patil Tears in Front of Siddaramaiah
Highlights

ಎಂ.ಬಿ ಪಾಟೀಲ್ ಅವರಿಗೆ ಮೊದಲ ಸಂಪುಟ ರಚನೆ ವೇಳೆ ಸಚಿವ ಸ್ಥಾನ ದೊರಕದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದರು.  ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಎಂ.ಬಿ ಪಾಟೀಲ್ ಈ ಬಗ್ಗೆ ಅಸಮಾಧಾನ ಹೊರಹಾಕಿ ಕಣ್ಣೀರು ಹಾಕಿದ್ದಾರೆ. 

ಬೆಂಗಳೂರು :  ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಸರ್ಕಾರದಲ್ಲಿ  ಸಚಿವರಾಗಿ 25 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.ಕಾಂಗ್ರೆಸ್ ನಿಂದ 15 ಹಾಗೂ ಜೆಡಿಎಸ್ ನಿಂದ 10 ಮಂದಿ ನೂತನ ಸಚಿವರಾಗಿದ್ದಾರೆ. ಇದೇ ಬೆನ್ನಲ್ಲೇ  ಕೆಲವರ ಅಸಮಾಧಾನ ಭುಗಿಲೆದ್ದಿದೆ. ತಮಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಕೂಡ ಮುಂದಾಗಿದ್ದಾರೆ. 

ಇನ್ನು ಎಂ.ಬಿ ಪಾಟೀಲ್ ಅವರಿಗೆ ಕೂಡ ಮೊದಲ ಸಂಪುಟ ರಚನೆ ವೇಳೆ ಸಚಿವ ಸ್ಥಾನ ದೊರಕದ ಹಿನ್ನೆಲೆಯಲ್ಲಿ  ಅಸಮಾಧಾನಗೊಂಡಿದ್ದಾರೆ.  ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಎಂ.ಬಿ ಪಾಟೀಲ್ ಅವರ ಮುಂದೆ ತಮಗೆ ಅನ್ಯಾಯವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ. 

ಸಮುದಾಯ ಎದುರಿಸಿ ಪಕ್ಷಕ್ಕಾಗಿ  ಹೋರಾಟ ಮಾಡಿದ್ದು, ಕಾಂಗ್ರೆಸ್ ನಿಂದ ನನಗೆ ದ್ರೋಹ ಮಾಡಲಾಗಿದೆ. ಅಲ್ಲದೇ ಈಗಲೇ ತಮಗೆ ಸಚಿವ ಸ್ಥಾನ ನೀಡುವುದಾದರೆ ಕೋಡಿ. ಇಲ್ಲವಾದಲ್ಲಿ ತಮಗೆ ಬೇಡ ಎಂದು  ಹೇಳಿದ್ದಾರೆ. 

ನಿನ್ನೆಯಷ್ಟೇ ಕಾಂಗ್ರೆಸ್ ನಿಂದ 15 ಮಂದಿ ಸಚಿವ ಸ್ಥಾನ ಅಲಂಕರಿಸಿದ್ದು, ಈ ವೇಳೆ ತಮಗೆ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಪಾಟೀಲ್ ಮುಂದಾಗಿದ್ದರು. ಅಲ್ಲದೇ ಅವರ ಅಭಿಮಾನಿಗಳೂ ಕೂಡ ಪ್ರತಿಭಟನೆ ನಡೆಸಿದ್ದರು. 

loader