ಬೆಂಗಳೂರು(ಸೆ.14): ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ನಿವಾಸ ರಾಜಕಾಲುವೆಗೆ ಒತ್ತುವರಿಯಾಗಿದೇಯಾ? ಎಂಬ ಪ್ರಶ್ನಗೆ ಬಿಬಿಎಂಪಿಯ ಮೇಯರ್ ಮಂಜುನಾಥ್ ರೆಡ್ಡಿ ಉಡಾಫೆಯ ಉತ್ತರ ನೀಡಿದ್ದಾರೆ.
ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪರ ಮನೆ ರಾಜಕಾಲುವೆ ಒತ್ತುವರಿಯಾಗಿದೆ ಅದನ್ನು ಕೆಡವಲು ಯಾಕೆ ನಿಧಾನವಾಗುತ್ತಿದೆ ಎಂದ ಪ್ರಶ್ನೆಗೆ ಮೇಯರ್ ಮಂಜುನಾಥ್ ರೆಡ್ಡಿ, ದರ್ಶನ್ ಮನೆ ಒತ್ತುವರಿ ವಿಚಾರ ದೊಡ್ಡ ಸಂಗತಿಯೇ ಅಲ್ಲ ಎಂದಿದ್ದಾರೆ.
ಸುಮ್ಮನೆ ಮಾಧ್ಯಮದವರು ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಿರುವಿರಿ ಎನ್ನುವ ಮೂಲಕ ಮಾಧ್ಯಮದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಅದು 20 ಅಡಿ ಆಳತೆಯ ಜಾಗ ಅದಕ್ಕೆ ಅಸ್ಟೋಂದು ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಬಡವರ ಮನೆ ಒಡೆಯಬೇಕಾದರೆ ಸಣ್ಣದು ದೊಡ್ಡದು ನೋಡದ ಮೇಯರ್ ಸಾಹೇಬರು ಈಗ ದೊಡ್ಡವರ ಮನೆ ಕಂಡಾಗ ಮಾತ್ರ 20 ಅಡಿ ಅಳತೆ ಜಾಗ ಚಿಕ್ಕದು ಎನ್ನುತ್ತಿದ್ದಾರೆ. ದೊಡ್ಡವರ ಮನೆ ಒಡೆಯ ಬೇಕಾದ ಸಂದರ್ಭದಲ್ಲಿ ಮಾತ್ರ ದಾಖಲೆಗಳು ಲಭ್ಯವಾಗಿಲ್ಲ ಎನ್ನುವ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ.
