ಇಬ್ಬರು ಮಕ್ಕಳ ತಾಯಿಯಾಗಿರುವ ಕವಿತಾ ಸನಿಲ್ ಅವರು ಹುಟ್ಟೂರಿನಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್‌ಗಾಗಿ ಸತತ ಎರಡು ತಿಂಗಳಿಂದ ಅಭ್ಯಾಸ ನಡೆಸಿದ್ದರು.
ಮಂಗಳೂರು(ನ.06): ನಗರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಕರಾಟೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ಸಾಂಕೇತಿಕವಾಗಿ ಪಂಚ್ ನೀಡಿ ಸುದ್ದಿ ಯಾಗಿದ್ದ ಮೇಯರ್ ಕವಿತಾ ಸನಿಲ್ ಇದೀಗ ಅದೇ ಕೂಟದ ರಿಯಲ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. 9 ವರ್ಷಗಳ ಬಳಿಕ ಕರಾಟೆ ಅಖಾಡಕ್ಕೆ ಇಳಿದ ಮೇಯರ್ ಕವಿತಾ ಅವರು 65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲ್ಯಾಕ್ ಬೆಲ್ಟ್ ವಿಭಾಗದ ಫೈನಲ್ ಪಂದ್ಯದಲ್ಲಿ ನಿಶಾ ನಾಯಕ್ ಅವರನ್ನು 7-3 ಅಂಕಗಳ ಅಂತರದಿಂದ ಸದೆಬಡಿದು ಚಿನ್ನದ ಪದಕವನ್ನು ಗೆದ್ದಿದ್ದಾರೆ.
1992ರಿಂದ 2008ರವರೆಗೆ ಸತತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಅವರು ಮೂರು ಬಾರಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದಿದ್ದರು. ಇದೀಗ ಇಬ್ಬರು ಮಕ್ಕಳ ತಾಯಿಯಾಗಿರುವ ಕವಿತಾ ಸನಿಲ್ ಅವರು ಹುಟ್ಟೂರಿನಲ್ಲಿ ನಡೆಯುತ್ತಿರುವ ಈ ಚಾಂಪಿಯನ್ಶಿಪ್ಗಾಗಿ ಸತತ ಎರಡು ತಿಂಗಳಿಂದ ಅಭ್ಯಾಸ ನಡೆಸಿದ್ದರು. 2 ಮಕ್ಕಳ ತಾಯಿಯಾಗಿ 9 ವರ್ಷ ಬಳಿಕ ರಾಷ್ಟ್ರೀಯ ಚಾಂಪಿಯನ್ನಲ್ಲಿ ಚಿನ್ನ ಗೆದ್ದಿರುವುದು ಸಂತಸ ತಂದಿದೆ. ಸಾಕಷ್ಟು ಶ್ರಮಪಟ್ಟಿದ್ದೇನೆ. ನನ್ನ ಕರಾಟೆ ಶಿಕ್ಷಕರ ಸತತ ತರಬೇತಿಯಿಂದ ಸಾಧ್ಯವಾಗಿದೆ ಎಂದು' ಕವಿತಾ ಸನಿಲ್ ತಿಳಿಸಿದ್ದಾರೆ.
