ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಗುಂಡಿ ಮುಚ್ಚಲು ಮೇಯರ್ ಸಂಪತ್ರಾಜ್ ಅಧಿಕಾರಿಗಳಿಗೆ 10 ದಿನ ಗಡುವು ನೀಡಿದ್ದಾರೆ.
ಬೆಂಗಳೂರು (ಅ.04): ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಗುಂಡಿ ಮುಚ್ಚಲು ಮೇಯರ್ ಸಂಪತ್ರಾಜ್ ಅಧಿಕಾರಿಗಳಿಗೆ 10 ದಿನ ಗಡುವು ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ನಡೆಯುವ ಅಪಘಾತದಲ್ಲಿ ಶೇ. 10 ರಷ್ಟು ಪ್ರಕರಣಗಳು ರಸ್ತೆ ಗುಂಡಿಗಳಿಂದ ಸಂಭವಿಸುತ್ತವೆ ಎಂದು ಬಿಬಿಎಂಪಿ ಮೂಲಗಳಿಂದಲೇ ಅಧಿಕೃತ ಮಾಹಿತಿ ದೊರೆತಿದೆ. ಹೀಗಾಗಿ ಮೇಯರ್ ಸಂಪತ್ ರಾಜ್ 8ವಲಯಗಳ ಅಧಿಕಾರಿಗಳ ಸಭೆ ನಡೆಸಿದ್ರು... ಸಭೆಯಲ್ಲಿ ರಸ್ತೆ ಗುಂಡಿಗಳ ಲೆಕ್ಕ ಹಾಕಿರುವ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿ 16,818 ಗುಂಡಿಗಳಿವೆ ಎಂದು ತಿಳಿಸಿದ್ರು... ಇಂಥ ಅಪಾಯಕಾರಿ ಗುಂಡಿಗಳಿಂದಲೇ ಅಪಘಾತ ಹೆಚ್ಚುತ್ತಿದ್ದು, 10 ದಿನದಲ್ಲಿ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
