ಭಾನುವಾರ ದೆಹಲಿಯಲ್ಲಿ16 ದಲಿತ, ಮುಸ್ಲಿಂ ಹಾಗೂ ಇತರೆ ಹಿಂದುಳಿದ ವರ್ಗಗಳ ನಾಯಕರ ಸಭೆಯನ್ನು ನಡೆಸಿದ್ದಾರೆ.
ನವದೆಹಲಿ(ಆ.08): ಲೋಕಸಭೆ ಹಾಗೂ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಆ ಪಕ್ಷದಿಂದಲೇ ಹೊರದಬ್ಬುವ ಪ್ರಯತ್ನವೊಂದು ಆರಂಭವಾಗಿದೆ.
ಕೆಲ ತಿಂಗಳವರೆಗೂ ಮಾಯಾವತಿ ಅವರ ಬಲಗೈ ಬಂಟನಂತಿದ್ದ ನಸೀಮುದ್ದೀನ್ ಸಿದ್ದಿಖಿ ಇದಕ್ಕೆ ಚಾಲನೆ ನೀಡಿದ್ದು, ಭಾನುವಾರ ದೆಹಲಿಯಲ್ಲಿ16 ದಲಿತ, ಮುಸ್ಲಿಂ ಹಾಗೂ ಇತರೆ ಹಿಂದುಳಿದ ವರ್ಗಗಳ ನಾಯಕರ ಸಭೆಯನ್ನು ನಡೆಸಿದ್ದಾರೆ. ಮಾಯಾವತಿ ವರ್ತನೆ ಹಾಗೂ ಸತತ ಸೋಲಿನ ಹಿನ್ನೆಲೆಯಲ್ಲಿ ಕೆಲವು ಶಾಸಕರು ಮಾಯಾವತಿ ಅವರನ್ನು ಕೆಳಗಿಳಿಸಬೇಕು ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಉಚ್ಚಾಟಿತ ನಾಯಕ ಸಿದ್ದಿಖಿ ಅವರು ತಂತ್ರ ಹೆಣೆಯುತ್ತಿದ್ದಾರೆ. ಸಿದ್ದಿಖಿ ಅವರಿಗೆ ಬಿಜೆಪಿ ಬೆಂಬಲ ಕೂಡ ಇದೆ ಎಂದು ಹೇಳಲಾಗಿದೆ.
