ಸರ್ಕಾರದ ನೋಟು ನಿಷೇಧ ಕ್ರಮದಿಂದ ಬಡವರು, ಕಾರ್ಮಿಕರು ಹಾಗೂ ರೈತರು ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಅವಧಿಯಲ್ಲಿ ಸಂಗ್ರಹವಗಿರುವ ಹಣವನ್ನು ಸರ್ಕಾರ ಬಡವರ ಖಾತೆಗೆ ಜಮೆ ಮಾಡಬೇಕು ಹಾಗೂ ರೈತರ ಸಾಲಗಳನ್ನು ಮನ್ನಾಮಾಡಬೇಕು ಎಂದು ಮಾಯಾವತಿ ಆಗ್ರಹಿಸಿದ್ದಾರೆ.

ನವದೆಹಲಿ (ಡಿ.15): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಕಳೆದ 37 ದಿನಗಳಲ್ಲಿ ಸಂಗ್ರಹವಾಗಿರುವ ಕಪ್ಪುಹಣವನ್ನು ಬಡವರ ಖಾತೆಗೆ ಜಮೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸರ್ಕಾರದ ನೋಟು ನಿಷೇಧ ಕ್ರಮದಿಂದ ಬಡವರು, ಕಾರ್ಮಿಕರು ಹಾಗೂ ರೈತರು ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಅವಧಿಯಲ್ಲಿ ಸಂಗ್ರಹವಗಿರುವ ಹಣವನ್ನು ಸರ್ಕಾರ ಬಡವರ ಖಾತೆಗೆ ಜಮೆ ಮಾಡಬೇಕು ಹಾಗೂ ರೈತರ ಸಾಲಗಳನ್ನು ಮನ್ನಾಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮೋದಿ ಸರ್ಕಾರವು ನೋಟು ಅಮಾನ್ಯ ಕ್ರಮವನ್ನು ಕೈಗೊಂಡಿದೆ, ಆದರೆ ಈ ಕ್ರಮ ಬಿಜೆಪಿಗೆ ತಿರುಗುಬಾಣವಾಗಿ ಪರಿಣಮಿಸಲಿದೆ ಎಂದು ಮಾಯಾವತಿ ಹೇಳಿದ್ದಾರೆ.