Asianet Suvarna News Asianet Suvarna News

2019ಕ್ಕೆ ಕಾಂಗ್ರೆಸೇತರ - ಬಿಜೆಪಿಯೇತರ ವ್ಯಕ್ತಿಗೆ ಪ್ರಧಾನಿ ಪಟ್ಟ..?

ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈಗಾಗಲೇ ವಿವಿಧ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ಇದೇ ವೇಳೆ ಬಂಡಾಯ ಕಾಂಗ್ರೆಸ್ ಮುಖಂಡ ಮುಂದಿನ ಪ್ರಧಾನಿ ಬಗ್ಗೆ ಹೇಳಿದ್ದಾರೆ. 

Mayawati For PM I Will Be Chief Minister Of Chhattisgarh Says Ajit Sing
Author
Bengaluru, First Published Nov 9, 2018, 4:18 PM IST

ನವದೆಹಲಿ :  ಕಿಂಗ್ ಇನ್ ಚತ್ತೀಸ್ ಗಢ, ಕಿಂಗ್ ಮೇಕರ್ ಇನ್  2019 ಎಂದು ಬಂಡಾಯ ಕಾಂಗ್ರೆಸ್ ಮುಖಂಡ ಅಜಿತ್ ಜೋಗಿ ಹೇಳಿದ್ದಾರೆ. 

ಇತ್ತೀಚೆಗಷ್ಟೇ ಮಾಯಾವತಿ ಅವರೊಂದಿಗೆ ಕೈ ಜೋಡಿಸಿದ  ಅವರು ಚತ್ತೀಸ್ ಗಢದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯುತ್ತಿದ್ದು ಮುಂದಿನ ಚುನಾವಣೆಯಲ್ಲಿ  ಹೆಚ್ಚಿನ ಪಾತ್ರ ವಹಿಸುವುದಾಗಿ ಹೇಳಿದ್ದಾರೆ. 

ಅಲ್ಲದೇ ತಾವು ಬಿಎಸ್ ಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಮುಂದಿನ ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾಗಿ ಅಜಿತ್ ಜೋಗಿ ಹೇಳಿದ್ದಾರೆ. 

ಇನ್ನು ದೇಶದ ಪ್ರಧಾನಿಯಾಗಲು ಬಿಎಸ್ ಪಿ ಮುಖಂಡೆ ಮಾಯಾವತಿ ಸೂಕ್ತ ಅಭ್ಯರ್ಥಿ ಎಂದು ಹೇಳಿದ್ದಾರೆ. 

2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸೇತರ ಹಾಗೂ ಬಿಜೆಪಿಯೇತರರು ಹೆಚ್ಚಿನ ಬಹುಮತ ಪಡೆದುಕೊಳ್ಳುತ್ತಾರೆ.  ಚುನಾವಣೆ ಬಳಿಕವೇ ಪ್ರಧಾನಿ ಯಾರಾಗಬೇಕೆನ್ನುವುದನ್ನು ತೀರ್ಮಾನ ಮಾಡುತ್ತೇವೆ. 

ಆದರೆ ಪ್ರಧಾನಿ ಸ್ಥಾನಕ್ಕೆ  ದಲಿತ ಮುಖಂಡೆ ಹಾಗೂ ಓರ್ವ ಪ್ರಭಾವಿ ಮಹಿಳೆಯಾಗಿರುವ ಮಾಯಾವತಿ  ಸೂಕ್ತ ವ್ಯಕ್ತಿ ಎನ್ನುವುದು ತಮ್ಮ ಅಭಿಪ್ರಾಯ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ. 

Follow Us:
Download App:
  • android
  • ios