ನವದೆಹಲಿ[ಮಾ.20]: ಮತ್ತೊಬ್ಬರ ಬದುಕಿನ ರೀತಿಯ ಕುರಿತು ಟೀಕಿಸುವ ನೈತಿಕತೆ ಬಿಎಸ್‌ಪಿ ನಾಯಕಿ ಮಾಯಾವತಿಗೆ ಇಲ್ಲ, ಸ್ವತಃ ಮಾಯಾವತಿ ದಿನನಿತ್ಯ ಮುಖಕ್ಕೆ ಸೌಂದರ್ಯ ವರ್ಧಕ ಮತ್ತು ತಲೆಗೆ ಬಣ್ಣ ಬಳಸುತ್ತಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ ಸಿಂಗ್‌ ತಿರುಗೇಟು ನೀಡಿದ್ದಾರೆ.

2014ರಲ್ಲಿ ಮೋದಿ ಚಾಯ್‌ವಾಲಾ ಆಗಿದ್ದರು, ಇದೀಗ ಅವರು ಚೌಕೀದಾರನಾಗಿ ಬದಲಾಗಿದ್ದಾರೆ ಎಂದು ಮಾಯಾವತಿ ಟ್ವೀಟರ್‌ನಲ್ಲಿ ಲೇವಡಿ ಮಾಡಿದ್ದರು.

ಅದಕ್ಕೆ ತಿರುಗೇಟು ನೀಡಿದ ಸುರೇಂದ್ರಸಿಂಗ್‌, ಉತ್ತಮ ವಸ್ತ್ರ ಧರಿಸುವುದು ಐಷಾರಾಮಿ ಜೀವನ ಅಲ್ಲ, ಮುಖಕ್ಕೆ ಸೌಂದರ್ಯ ವರ್ಧಕ ಬಳಸುವ ಮಾಯಾವತಿಗೆ, ಉತ್ತಮ ಬಟ್ಟೆಧರಿಸುವವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. 60 ವರ್ಷದ ಮಾಯಾವತಿ ತಲೆಗೂದಲು ಇನ್ನೂ ಕಪ್ಪಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.