ಹಿರಿಯ ನಾಯಕ ಎಚ್‌.ಡಿ. ರೇವಣ್ಣ ಮತ್ತು ಪರಿ​ಷತ್‌ ಸದಸ್ಯ ಟಿ.ಎ.ಶರವಣ ನೇತೃತ್ವದ ತಂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪರಿಷತ್ತಿನಲ್ಲಿ ದೋಸ್ತಿ ಮಾತುಕತೆ ನಡೆಸಿದ್ದಾರೆ.

ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರ​ಮೂರ್ತಿ ಅವರು ರಾಜ್ಯಪಾಲರಾಗುವ ಹಿನ್ನಲೆಯಲ್ಲಿ ಜೆಡಿಎಸ್‌ನ ಮುಖಂಡರು ಮುಖ್ಯಮಂತ್ರಿ ಸಿದ್ದರಾ​ಮಯ್ಯ ಅವರನ್ನು ಭೇಟಿ ಮಾಡಿ ವಿಧಾನ​ಪರಿಷತ್‌ ಸಭಾಪತಿ ಹುದ್ದೆಯನ್ನು ಜೆಡಿಎಸ್‌ಗೆ ಕಲ್ಪಿಸುವಂತೆ ವಿನಂತಿಸಿದ್ದಾರೆ. ಹಿರಿಯ ನಾಯಕ ಎಚ್‌.ಡಿ. ರೇವಣ್ಣ ಮತ್ತು ಪರಿ​ಷತ್‌ ಸದಸ್ಯ ಟಿ.ಎ.ಶರವಣ ನೇತೃತ್ವದ ತಂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪರಿಷತ್ತಿನಲ್ಲಿ ದೋಸ್ತಿ ಮಾತುಕತೆ ನಡೆಸಿದ್ದಾರೆ. ಜೆಡಿಎಸ್‌ನಲ್ಲಿ ಬಸವರಾಜ ಹೊರ ಟ್ಟಿಸ್ಥಾನ ಅಲಂಕರಿ​ಸುವುದಕ್ಕೆ ನೆರವಾಗ ಬೇಕು. ಇದಕ್ಕೆ ಕಾಂಗ್ರೆಸ್‌ ಬೆಂಬಲ ಸಿಗುವಂತಾಗಬೇಕು ಎಂದು ವಿನಂತಿಸಿ​ದ್ದಾರೆ.