ಕಾಶ್ಮೀರ ಗಡಿಯಲ್ಲಿ ಈ ವರ್ಷ ಅತಿ ಹೆಚ್ಚು ಯೋಧರು ಬಲಿ

Maximum Number Of Soldiers Killed This Year
Highlights

ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಶತ್ರುಗಳ ವಿರುದ್ಧದ ಗುಂಡಿನ ಕಾರ್ಯಾಚರಣೆಯಲ್ಲಿ 2018ನೇ ಸಾಲಿನಲ್ಲಿ ಈವರೆಗೂ 11 ಮಂದಿ ಬಿಎಸ್‌ಎಫ್‌ ಯೋಧರು ಹುತಾತ್ಮರಾಗಿದ್ದಾರೆ. ಇದು ಈ ವರ್ಷದ ಭಾರತದ ಯಾವುದೇ ಗಡಿ ಪ್ರದೇಶದಲ್ಲಿ ಉಂಟಾದ ಯೋಧರ ಅತಿಹೆಚ್ಚಿನ ಸಾವಿನ ಸಂಖ್ಯೆಯಾಗಿದೆ.

ನವದೆಹಲಿ: ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಶತ್ರುಗಳ ವಿರುದ್ಧದ ಗುಂಡಿನ ಕಾರ್ಯಾಚರಣೆಯಲ್ಲಿ 2018ನೇ ಸಾಲಿನಲ್ಲಿ ಈವರೆಗೂ 11 ಮಂದಿ ಬಿಎಸ್‌ಎಫ್‌ ಯೋಧರು ಹುತಾತ್ಮರಾಗಿದ್ದಾರೆ. ಇದು ಈ ವರ್ಷದ ಭಾರತದ ಯಾವುದೇ ಗಡಿ ಪ್ರದೇಶದಲ್ಲಿ ಉಂಟಾದ ಯೋಧರ ಅತಿಹೆಚ್ಚಿನ ಸಾವಿನ ಸಂಖ್ಯೆಯಾಗಿದೆ.

 2018ನೇ ಸಾಲಿನಲ್ಲಿ ಇದುವರೆಗೂ ಗಡಿಯಲ್ಲಿ ಒಟ್ಟು 320 ಕದನ ವಿರಾಮ ಉಲ್ಲಂಘನೆಯ ದಾಳಿಗಳಲ್ಲಿ ಬಿಎಸ್‌ಎಫ್‌ನ 11 ಯೋಧರು ಹುತಾತ್ಮರಾಗಿದ್ದು, 37 ಯೋಧರು ಗಾಯಗೊಂಡಿದ್ದಾರೆ. 2017ರಲ್ಲಿ ಕೇವಲ 111 ಅಪ್ರಚೋದಿತ ದಾಳಿಗಳು ನಡೆದಿದ್ದವು. 

ಅದೇ ರೀತಿ 2016ರಲ್ಲಿ 204 ಅಪ್ರಚೋದಿತ ದಾಳಿಗಳಲ್ಲಿ ಐವರು ಯೋಧರು ವೀರ ಮರಣವನ್ನಪ್ಪಿದರೆ, 10 ಯೋಧರು ಗಾಯ ಗೊಂಡಿದ್ದರು. 2015ರಲ್ಲಿ ಓರ್ವ ಯೋಧ ಸಾವನ್ನಪ್ಪಿ, ಐವರು ಗಾಯಗೊಂಡಿದ್ದರು. ಅದೇ ರೀತಿ 2014ರಲ್ಲಿ ಅಪ್ರಚೋದಿತ ದಾಳಿಯಲ್ಲಿ ಇಬ್ಬರು ಯೋಧರು ಮಡಿದು, 14 ಮಂದಿ ಗಾಯಗೊಂಡಿದ್ದರು.

loader